ಪ್ರಜಾಪ್ರಭುತ್ವ ಪ್ರಕ್ರಿಯೆ ಬದಿಗೆ ಸರಿಸಿ ಕಾನೂನು ತಂದ ಬಿಜೆಪಿ ಸರ್ಕಾರ: ಪ್ರಿಯಾಂಕಾ ಗಾಂಧಿ ವಾದ್ರಾ ಟೀಕೆ

Update: 2024-04-20 11:40 GMT

ಪ್ರಿಯಾಂಕ ಗಾಂಧಿ | PC : PTI 

ಹೊಸದಿಲ್ಲಿ: ಭಾರತದ ಸಂವಿಧಾನವನ್ನು ಬಿಜೆಪಿಯು ತನ್ನ ದುರಾಸೆಯ ಸಾಧನವನ್ನಾಗಿಸಿದೆ ಹಾಗೂ ಪ್ರಜಾಪ್ರಭುತ್ವದ ಪ್ರಕ್ರಿಯೆಯನ್ನು ಬದಿಗೆ ಸರಿಸಿ ಕಾನೂನುಗಳನ್ನು ಜಾರಿಗೆ ತಂದಿದೆ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಆರೋಪಿಸಿದ್ದಾರೆ.

ಕೇರಳದ ಚಾಲುಕುಡಿ ಲೋಕಸಭಾ ಕ್ಷೇತ್ರದಲ್ಲಿ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕಾ, “ಅವರು ಸಂವಿಧಾನವನ್ನು ಕೇವಲ ಕಾಗದದ ಒಂದು ತುಂಡು ಎಂಬಂತೆ ತಮ್ಮ ದುರಾಸೆ ಮತ್ತು ಮಹತ್ವಾಕಾಂಕ್ಷೆಗಳಿಗಾಗಿ ಬಳಸಿದ್ದಾರೆ,” ಎಂದು ಹೇಳಿದರು.

“ನವ ಭಾರತ ಎಂದು ನಮಗೆ ಹೇಳಲಾಗುತ್ತಿರುವ ದೇಶದಲ್ಲಿ ನ್ಯಾಯಪರತೆಯ ಮೇಲೆ ಬಲಪ್ರಯೋಗವಿದೆ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆ ಬದಿಗೆ ಸರಿಸಿ ಕಾನೂನುಗಳನ್ನು ಜಾರಿಗೆ ತಂದು ಜನರ ಇಚ್ಛೆಗೆ ವಿರುದ್ಧವಾಗಿ ಅವರ ಮೇಲೆ ಹೇರಲಾಗುತ್ತಿದೆ,” ಎಂದು ಅವರು ಹೇಳಿದರು.

ಚೀನೀ ಒತ್ತುವರಿಯನ್ನು ವಿರೋಧಿಸಿ ಲಡಾಖ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಕೇಂದ್ರ ಮೌನ ತಾಳಿದೆ ಮತ್ತು ಚುನಾವಣೆಗಳು ಹತ್ತಿರ ಬಂದಾಗ ಮಾತ್ರ ರೈತರ ಅಭಿಪ್ರಾಯಗಳನ್ನು ಆಲಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಪ್ರಿಯಾಂಕಾ ಅವರು ಕಾಂಗ್ರೆಸ್‌ ಅಭ್ಯರ್ಥಿ ಬೆನ್ನಿ ಬೆಹನನ್‌ ಪರ ಕ್ಷೇತ್ರದಲ್ಲಿ ಪ್ರಚಾರದಲ್ಲಿ ಭಾಗವಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News