ಎನ್‌ಡಿಎಯಿಂದ ಹೊರನಡೆದ ಎಐಎಡಿಎಂಕೆ: ಇನ್ನೂ ಬಿಜೆಪಿ ಜೊತೆ ಉಳಿದುಕೊಂಡವರು ಅವಕಾಶವಾದಿಗಳು ಎಂದ ಕಪಿಲ್ ಸಿಬಲ್
Update: 2023-09-26 07:24 GMT
ಹೊಸದಿಲ್ಲಿ: ಎಐಎಡಿಎಂಕೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ) ದಿಂದ ಹೊರನಡೆದಿರುವ ಕುರಿತು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಮಂಗಳವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮತ್ತೊಂದು ಮಿತ್ರ ಪಕ್ಷವು ಬಿಜೆಪಿಯನ್ನು ತೊರೆದಿದೆ. ಆದರೆ, ಇನ್ನೂ ಬಿಜೆಪಿ ಜೊತೆ ಇರುವವರು ಸೈದ್ಧಾಂತಿಕ ಬದ್ಧತೆಯಿಲ್ಲದ ಅವಕಾಶವಾದಿಗಳು ಮಾತ್ರ ಎಂದು ಹೇಳಿದ್ದಾರೆ.
ಬಿಜೆಪಿಯೊಂದಿಗಿನ ತನ್ನ ನಾಲ್ಕು ವರ್ಷಗಳ ಸಂಬಂಧವನ್ನು ಕೊನೆಗೊಳಿಸಿದ ಎಐಎಡಿಎಂಕೆ ಸೋಮವಾರ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಿಂದ ಹೊರನಡೆಯುವುದಾಗಿ ಘೋಷಿಸಿದ್ದು, 2024 ರ ಲೋಕಸಭೆ ಚುನಾವಣೆಗೆ ಪ್ರತ್ಯೇಕ ರಂಗವನ್ನು ಮುನ್ನಡೆಸುವುದಾಗಿ ಹೇಳಿದೆ.
ಯುಪಿಎ 1 ಮತ್ತು 2 ರ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದ ಸಿಬಲ್ ಕಳೆದ ವರ್ಷ ಮೇ ತಿಂಗಳಲ್ಲಿ ಕಾಂಗ್ರೆಸ್ ತೊರೆದು ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಸ್ವತಂತ್ರ ಸದಸ್ಯರಾಗಿ ರಾಜ್ಯಸಭೆಗೆ ಆಯ್ಕೆಯಾದರು.