ಜಾರ್ಖಂಡ್ ನ ಎಲ್ಲಾ ಬುಡಕಟ್ಟು ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋಲು

Update: 2024-06-05 16:49 GMT

ಸಾಂದರ್ಭಿಕ ಚಿತ್ರ | PC : PTI 

 

ಹೊಸದಿಲ್ಲಿ : ಜಾರ್ಖಂಡ್ ನ ಬುಡಕಟ್ಟು ಸಮುದಾಯಕ್ಕೆ ಮೀಸಲಾಗಿದ್ದ ಎಲ್ಲಾ 5 ಕ್ಷೇತ್ರಗಳಲ್ಲಿ ಬಿಜೆಪಿ ಸೋತಿದೆ. ಬಿಜೆಪಿ ಸೋತ ಕ್ಷೇತ್ರಗಳೆಂದರೆ ಖುಂಟಿ, ಲೊಹರ್ದಾಗ, ಸಿಂಗ್ಭೂಮ್, ರಾಜ್ಮಹಲ್ ಹಾಗೂ ದುಮ್ಕಾ.

ಖುಂಟಿ ಹಾಗೂ ಲೋಹರ್ದಾಗದಲ್ಲಿ ಕಾಂಗ್ರೆಸ್ ಜಯ ಗಳಿಸಿದ್ದರೆ, ಸಿಂಗ್ಭೂಮ್, ರಾಜ್ಮಹಲ್ ಹಾಗೂ ದುಮ್ಕಾದಲ್ಲಿ ಜೆಎಂಎಂ ಗೆದ್ದಿದೆ. 2019ರಲ್ಲಿ ಬಿಜೆಪಿ ಈ ಐದು ಕ್ಷೇತ್ರಗಳ ಪೈಕಿ ರಾಜ್ಮಹಲ್ ಹಾಗೂ ಸಿಂಗ್ಭೂಮ್ನಲ್ಲಿ ಗೆದ್ದಿತ್ತು.

ಖಂಟಿಯಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಅವರು ಕಾಂಗ್ರೆಸ್ನ ಕಾಳಿಚರಣ್ ಮುಂಡಾ ಅವರ ವಿರುದ್ಧ ಸೋತಿದ್ದಾರೆ. ದುಮ್ಕಾದಲ್ಲಿ ಸೀತಾ ಸೊರೇನ್ ಅವರು ಜೆಎಂಎಂನ ಏಳು ಬಾರಿ ಶಾಸಕರಾಗಿದ್ದ ನಳೀನ್ ಸೊರೇನ್ ವಿರುದ್ಧ ಸೋತಿದ್ದಾರೆ. ಬಿಜೆಪಿ ದುಮ್ಕಾದಲ್ಲಿ ತನ್ನ ಅಧಿಕೃತ ನಾಮನಿರ್ದೇಶಿತ ಮತ್ತು ಹಾಲಿ ಸಂಸದ ಸುನೀಲ್ ಸೊರೇನ್ ಅವರನ್ನು ಹಿಂಪಡೆದುಕೊಂಡ ಬಳಿಕ ಮೂರು ಬಾರಿ ಜೆಎಂಎಂನ ಶಾಸಕರಾಗಿದ್ದ ಸೀತಾ ಸೊರೇನ್ ಅವರನ್ನು ಕಣಕ್ಕಿಳಿಸಿತ್ತು.

ಲೋಕಸಭಾ ಚುನಾವಣೆಯ ಮುನ್ನ ಬಿಜೆಪಿ ಸೇರಿದ್ದ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಅವರ ಪತ್ನಿ ಗೀತಾ ಕೋಡಾ ಅವರು ಸಿಂಗ್ಭೂಮ್ನಲ್ಲಿ ಜೆಎಂಎಂನ ಜೋಬಾ ಮಾಂಝಿ ವಿರುದ್ಧ ಸೋತಿದ್ದಾರೆ.

ಲೋಹರ್ದಾಗದಲ್ಲಿ ಬಿಜೆಪಿ ತನ್ನ ಹಾಲಿ ಸಂಸದ ಸುದರ್ಶನ್ ಭಗತ್ ಬದಲಿಗೆ ಸಮೀರ್ ಓರಾನ್ ಅವರನ್ನು ಕಣಕ್ಕಿಳಿಸಿತ್ತು. ಆದರೆ, ಅವರು ಕಾಂಗ್ರೆಸ್ನ ಸುಖದೇವ್ ಭಗತ್ ವಿರುದ್ಧ ಸೋತಿದ್ದಾರೆ. ರಾಜ್ ರಾಜ್ಮಹಲ್ ಲೋಕಸಭಾ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಜೆಎಂಎಂ ಯಶಸ್ವಿಯಾಗಿದೆ. ಇಲ್ಲಿ ಜೆಎಂಎಂನ ವಿಜಯ್ ಹಂಸದಕ್ ಅವರು ಬಿಜೆಪಿಯ ತಲಾ ಮರಾಂಡಿ ಅವರನ್ನು ಸೋಲಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News