ಸಂಸತ್‌ ಭದ್ರತಾ ವೈಫಲ್ಯ ಪ್ರಕರಣ: ಸಂಸದ ಪ್ರತಾಪ್‌ ಸಿಂಹ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದ ಸಚಿವ ಪ್ರಹ್ಲಾದ್‌ ಜೋಶಿ

BJP MP Prathap Simha's statement recorded in Parliament security breach case: Pralhad Joshi

Update: 2023-12-22 11:01 GMT

ಪ್ರಹ್ಲಾದ್‌ ಜೋಶಿ (PTI)

ಹೊಸದಿಲ್ಲಿ: ಸಂಸತ್‌ ಭದ್ರತಾ ವೈಫಲ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಲೋಕಸಭಾ ಸಂಸದ ಪ್ರತಾಪ್‌ ಸಿಂಹ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಇಂದು ಹೇಳಿದ್ದಾರೆ.

ಡಿಸೆಂಬರ್‌ 13ರಂದು ನಡೆದ ಈ ಘಟನೆಯ ತನಿಖೆ ನಡೆಯುತ್ತಿದೆ, ವರದಿ ಸಲ್ಲಿಕೆಯಾದ ನಂತರ ಕಾನೂನಾತ್ಮಕ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಮೈಸೂರು ಕ್ಷೇತ್ರದ ಸಂಸದರಾಗಿರುವ ಪ್ರತಾಪ್‌ ಸಿಂಹ ಅವರ ಕಚೇರಿಯಿಂದ ಪ್ರಕರಣದ ಆರೋಪಿಗಳಲ್ಲೊಬ್ಬಾತನಿಗೆ ಪಾಸ್‌ ನೀಡಲಾಗಿತ್ತೆಂಬ ವಿಚಾರ ಸಾಕಷ್ಟು ವಿವಾದಕ್ಕೀಡಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News