ಬಿಜೆಪಿಯ 4000 ಎಂಪಿಗಳು ಗೆಲ್ತಾರೆ ಎಂದು ಹೇಳಿ ಪ್ರಧಾನಿ ಮೋದಿ ಕಾಲಿಗೆ ಬಿದ್ದ ನಿತೀಶ್ ಕುಮಾರ್

Update: 2024-04-07 17:28 GMT

ಪಾಟ್ನಾ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರು ಎನ್‌ಡಿಎಯ ಎಲ್ಲ 4,000 ಸಂಸದರು ಗೆಲ್ಲುತ್ತಾರೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿ ಪ್ರಧಾನಿ ಮೋದಿ ಕಾಲಿಗೆ ಬೀಳುವ ಮೂಲಕ, ಪ್ರಧಾನಿಗೆ ಭಾರಿ ಮುಜುಗರವನ್ನುಂಟು ಮಾಡಿದ್ದಾರೆ.

ನಾವಡಾದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಸಮಾವೇಶವನ್ನುದ್ದೇಶಿಸಿ 25 ನಿಮಿಷಗಳ ಕಾಲ ಮಾತನಾಡಿದ ನಿತೀಶ್ ಕುಮಾರ್, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರು ಎನ್‌ಡಿಎಯ ಎಲ್ಲ 4,000 ಸಂಸದರನ್ನು ಗೆಲ್ಲಿಸಲಿದ್ದಾರೆ ಎಂದು ಹೇಳಿದರು. ಈ ಭಾಷಣದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ನಿತೀಶ್ ಕುಮಾರ್‌ರಂಥ ಹಿರಿಯ ರಾಜಕಾರಣಿಗಳು ತಮ್ಮ ಭಾಷಣದಲ್ಲಿ ಉಲ್ಲೇಖಿಸಿರುವ ಉತ್ಪ್ರೇಕ್ಷಿತ ಸಂಖ್ಯೆಯ ಕುರಿತು ಭಾರಿ ಪ್ರಮಾಣದ ಟೀಕೆ, ವ್ಯಂಗ್ಯ ವ್ಯಕ್ತವಾಗಿದೆ.

ಭಾರತದ ಲೋಕಸಭೆಯ ಸಂಖ್ಯಾಬಲ 543 ಆಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಎನ್‌ಡಿಎ ಮೈತ್ರಿಕೂಟಕ್ಕೆ ನೀಡಿರುವ ಗುರಿ 400 ಆಗಿದೆ. ಹೀಗಿದ್ದೂ, ನಿತೀಶ್ ಕುಮಾರ್ 4,000 ಎನ್‌ಡಿಎ ಸಂಸದರು ಗೆಲ್ಲಲಿದ್ದಾರೆ ಎಂದು ಹೇಳುವ ಮೂಲಕ ವೇದಿಕೆಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಎನ್‌ಡಿಎ ಮೈತ್ರಿಕೂಟಕ್ಕೆ ಭಾರಿ ಮುಜುಗರವನ್ನುಂಟು ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News