ʼಅಚ್ಛೇ ದಿನ್‌ʼ ಬರಲ್ಲ, ಕರಾಳ ದಿನಗಳು ಬರಲಿದೆ: ಮೋದಿ ಸರ್ಕಾರದ ವಿರುದ್ಧ ಉದ್ಧವ್‌ ಠಾಕ್ರೆ ವಾಗ್ದಾಳಿ

Update: 2024-05-12 07:44 GMT

ಉದ್ಧವ್‌ ಠಾಕ್ರೆ (PTI)

ಮುಂಬೈ: ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನಕ್ಕೆ ದೇಶವು ಸಜ್ಜಾಗುತ್ತಿದ್ದು, ಈ ವೇಳೆ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವಿನ ವಾಗ್ದಾಳಿ ಮುಂದುವರಿದಿದೆ. ಕೇಂದ್ರದ ನರೇಂದ್ರ ಮೋದಿ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರಕಾರವನ್ನು ಸೋಲಿಸದಿದ್ದರೆ ಮುಂದಿನ ದಿನಗಳಲ್ಲಿ ದೇಶವು ಕರಾಳ ದಿನಗಳನ್ನು ನೋಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈಗಿನ ಸರಕಾರವನ್ನು ಸೋಲಿಸಿದರೆ ಮಾತ್ರ ದೇಶದ ಭವಿಷ್ಯವು ಶಾಂತಿಯುತವಾಗಿರುತ್ತದೆ. ಇಲ್ಲದಿದ್ದರೆ ದೇಶವು ಕರಾಳ ದಿನಗಳನ್ನು ನೋಡುತ್ತದೆ. ʼಅಚ್ಚೇ ದಿನ್ʼ ಎಂದಿಗೂ ಬರಲಿಲ್ಲ, ಆದರೆ ಕರಾಳ ದಿನಗಳು ಬರುತ್ತವೆ ಎಂದು ಶಿವಸೇನೆ ಪಕ್ಷದ ಮುಖವಾಣಿ 'ಸಾಮ್ನಾ' ಗೆ ನೀಡಿದ ಸಂದರ್ಶನದಲ್ಲಿ ಠಾಕ್ರೆ ಹೇಳಿದ್ದಾರೆ.

ಅಭಿವೃದ್ಧಿಯ ವಿಚಾರದಲ್ಲಿ ಹೇಳಿಕೊಳ್ಳುವಂತಹ ಸಾಧನೆ ಯಾವುದೂ ಇಲ್ಲದಿರುವುದರಿಂದ ಚುನಾವಣಾ ಭಾಷಣದಲ್ಲಿ ಬಿಜೆಪಿ ರಾಮನ ಹೆಸರು ಹೇಳುತ್ತಿದೆ ಎಂದು ವಾಗ್ದಾಳಿ ನಡೆಸಿದ ಠಾಕ್ರೆ, ಭ್ರಷ್ಟರನ್ನು ರಕ್ಷಿಸುವುದೇ ʼಮೋದಿ ಗ್ಯಾಂರೆಂಟಿʼ ಎಂದು ಟೀಕಿಸಿದರು.


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News