ಬಾಂಬೆ ಹೈಕೋರ್ಟ್ ಪೀಠದ ಭಾಗವಾಗಲಿರುವ ವಿದೇಶಿ ನ್ಯಾಯಾಧೀಶರು

Update: 2024-09-06 12:34 GMT

ಬಾಂಬೆ ಹೈಕೋರ್ಟ್ | PC : PTI

ಮುಂಬೈ: ಪ್ರಪ್ರಥಮ ಬಾರಿಗೆ ಬಾಂಬೆ ಹೈಕೋರ್ಟ್‌ನ ಮೂರು ವಿವಿಧ ಪೀಠಗಳ ಭಾಗವಾಗಿ ಮೂವರು ವಿದೇಶಿ ನ್ಯಾಯಾಲಯಗಳ ನ್ಯಾಯಾಧೀಶರು ಕಾರ್ಯನಿರ್ವಹಿಸಲಿದ್ದಾರೆ.

ಬಾಂಬೆ ಹೈಕೋರ್ಟ್ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಸಿಂಗಾಪುರ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಸುಂದರೇಶ್ ಮೆನನ್ ಸೇರಿದಂತೆ ಮೂವರು ಸಿಂಗಪುರ ನ್ಯಾಯಾಧೀಶರು ಬಾಂಬೆ ಹೈಕೋರ್ಟ್ ಔಪಚಾರಿಕ ಪೀಠಗಳ ಭಾಗವಾಗಲಿದ್ದಾರೆ ಎಂದು ಹೇಳಲಾಗಿದೆ ಎಂದು Live Law ಸುದ್ದಿ ಸಂಸ್ಥೆ ವರದಿ ಮಾಡಿದೆ.

ಔಪಚಾರಿಕ ಪೀಠವನ್ನು ಮುಖ್ಯ ನ್ಯಾಯಮೂರ್ತಿ ಜಿ.ಎಸ್.ಕುಲಕರ್ಣಿ ಹಾಗೂ ನ್ಯಾ. ಫಿರ್ದೋಶ್ ಪಿ.ಪೂನಿವಾಲಾರೊಂದಿಗೆ ನ್ಯಾ. ಸುಂದರೇಶ್ ಮೆನನ್ ಹಂಚಿಕೊಳ್ಳಲಿದ್ದಾರೆ.

ಸಿಂಗಾಪುರ ಸುಪ್ರೀಂಕೋರ್ಟ್ ನ್ಯಾಯಾಧೀಶ ರಮೇಶ್ ಕಣ್ಣನ್ ಅವರು ನ್ಯಾ. ನಿತಿನ್ ಜಾಮ್ದಾರ್ ಹಾಗೂ ನ್ಯಾ. ಎಂ.ಎಂ.ಸತಾಯೆ ಅವರನ್ನೊಳಗೊಂಡ ನ್ಯಾಯಪೀಠದ ಭಾಗವಾಗಲಿದ್ದಾರೆ. ನ್ಯಾ. ಆ್ಯಂಡ್ರೆ ಫ್ರಾನ್ಸಿಸ್ ಮನಿಯಮ್ ಅವರು ನ್ಯಾ. ಕೆ.ಆರ್.ಶ್ರೀರಾಮ್ ಹಾಗೂ ನ್ಯಾ. ಜಿತೇಂದ್ರ ಎಸ್. ಜೈನ್ ಅವರನ್ನೊಳಗೊಂಡ ನ್ಯಾಯಪೀಠದಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News