ಬಿಹಾರದಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿತ: ಓರ್ವ ಮೃತ್ಯು, ಹಲವರು ಸಿಲುಕಿರುವ ಶಂಕೆ

Update: 2024-03-22 05:28 GMT

Photo: PTI 

ಪಾಟ್ನಾ: ನಿರ್ಮಾಣ ಹಂತದಲ್ಲಿನ ಸೇತುವೆ ಕುಸಿದು ಓರ್ವ ವ್ಯಕ್ತಿ ಮೃತಪಟ್ಟು, ಹಲವಾರು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಘಟನೆಯು ಬಿಹಾರದ ಸುಪೌಲ್ ಎಂಬಲ್ಲಿ ನಡೆದಿದೆ. ಸ್ಥಳೀಯ ಪ್ರಾಧಿಕಾರಗಳು ಹಾಗೂ ಸ್ವಯಂಸೇವಕರು ತ್ವರಿತ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಅವಶೇಷಗಳಡಿ ಇನ್ನೂ 30 ಮಂದಿ ಸಿಲುಕಿಕೊಂಡಿರುಬಹುದು ಎಂದು ಸ್ಥಳೀಯ ಪ್ರಾಧಿಕಾರಗಳು ಶಂಕಿಸಿವೆ.

ವರದಿಗಳ ಪ್ರಕಾರ, ಸೇತುವೆಯನ್ನು ರೂ. 984 ಕೋಟಿ ವೆಚ್ಚದಲ್ಲಿ ಕೋಸಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿದೆ.

ಈ ಅವಘಡವು ಬಿಹಾರದ ಭಗಲ್ಪುರ್ ನಲ್ಲಿ ನಡೆದಿದ್ದ ನಿರ್ಮಾಣ ಹಂತದ ಸೇತುವೆಯ ಕುಸಿತವನ್ನೇ ಹೋಲುವಂತಿದ್ದು, ಈ ಘಟನೆಯು ಆಗ ವಿರೋಧ ಪಕ್ಷವಾಗಿದ್ದ ಬಿಜೆಪಿ ಮತ್ತು ರಾಜ್ಯ ಸರಕಾರದ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News