2023ರಲ್ಲಿ ಪಂಜಾಬ್ ಗಡಿಯಲ್ಲಿ ಪಾಕಿಸ್ತಾನದ 107 ಡ್ರೋನ್‌ಗಳನ್ನು ಹೊಡೆದುರುಳಿಸಿದ ಬಿಎಸ್‌ಎಫ್!

Update: 2024-01-01 15:13 GMT

Photo: X/@BSF_Punjab

ಹೊಸದಿಲ್ಲಿ : ಪಂಜಾಬ್‌ನ ಗಡಿ ಭಾಗದಲ್ಲಿ ಬಿಎಸ್‌ಎಫ್(ಭಾರತ ಗಡಿ ಭದ್ರತಾಪಡೆ) 107 ಪಾಕಿಸ್ತಾನದ ಡ್ರೋನ್‌ಗಳನ್ನು ಹೊಡೆದುರುಳಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಭಾರತದ ಪಶ್ಚಿಮ ಪಾರ್ಶ್ವದ ಉದ್ದಕ್ಕೂ ಹಾದು ಹೋಗುವ ಜಮ್ಮು, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್‌ನ ಅಂತರರಾಷ್ಟ್ರೀಯ ಗಡಿಯ 2,289 ಕಿ.ಮೀ ಗೂ ಹೆಚ್ಚು ಭಾಗವನ್ನು ಬಿಎಸ್ಎಫ್ ಕಾವಲು ಕಾಯುತ್ತದೆ. ಪಂಜಾಬ್‌ ಪ್ರಾಂತ್ಯವು 553ಕಿ.ಮೀ ನಷ್ಟು ಗಡೀ ಭಾಗ ಪಾಕಿಸ್ತಾನ್ಕಕೆ ಹೊಂದಿಕೊಂಡಿದೆ.

ಗುಪ್ತಚರ ಮಾಹಿತಿಯ ಪ್ರಕಾರ, ವಶಪಡಿಸಿಕೊಂಡ ಹೆಚ್ಚಿನ ಡ್ರೋನ್ ಗಳು ಚೀನಾ ನಿರ್ಮಿತವಾಗಿದ್ದು, ಗಡಿಯುದ್ದಕ್ಕೂ ಸಾಗುವ ಕೃಷಿಭೂಮಿಯ ಸಮೀಪದಲ್ಲಿಯೇ ಹಾರಾಟ ನಡೆಸುತ್ತಿತ್ತು. ರಾಜಸ್ಥಾನ ಗಡಿಯಿಂದ ಸುಮಾರು ಹತ್ತು ಡ್ರೋನ್ಗಳನ್ನು ಇದೇ ಸಮಯದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2023ರಲ್ಲಿ ಪಂಜಾಬ್ ಪ್ರಾಂತ್ಯದಲ್ಲಿ ಬಿಎಸ್ಎಫ್ 442.39 ಕೆ.ಜಿ ಹೆರಾಯಿನ್ ವಶಪಡಿಸಿಕೊಂಡಿದೆ. 23 ವಿಭಿನ್ನ ಸಾಮರ್ಥ್ಯದ ಶಸ್ತ್ರಾಸ್ತ್ರಗಳು, 505 ಸುತ್ತು ಮದ್ದುಗುಂಡಗಳೂ ಸಿಕ್ಕಿವೆ. ಇವೆಲ್ಲವೂ ಡ್ರೋನ್ ಬಳಸಿ ಗಡಿ ಭಾಗದಲ್ಲಿ ಅಲ್ಲಲ್ಲಿ ಬೀಳಿಸಲಾಗಿರುವ ವಸ್ತುಗಳು ಎಂದು ಬಿಎಸ್ಎಫ್ ಮೂಲಗಳು ತಿಳಿಸಿವೆ.

ತನ್ನ ಕಾರ್ಯಚರಣೆಯಲ್ಲಿ ಗಡಿ ಭದ್ರತಾ ಪಡೆ ಮೂರು ಪಾಕಿಸ್ತಾನಿ ನುಸುಳುಕೋರರನ್ನು ಕೊಂದಿದೆ. ಇಬ್ಬರು ಸ್ಮಗ್ಲರ್‌ಗಳು ಸೇರಿದಂತೆ 23 ಪಾಕಿಸ್ತಾನಿ ಪ್ರಜೆಗಳನ್ನು ಬಿಎಸ್‌ಎಫ್ ಬಂಧಿಸಿದೆ. ಗುಪ್ತಚಾರ ಮಾಹಿತಿಯ ಪ್ರಕಾರ, ಹದಿನಾಲ್ಕು ಬಾಂಗ್ಲಾದೇಶ ಪ್ರಜೆಗಳು, 35 ಕಳ್ಳಸಾಗಾಣಿಕೆದಾರರನ್ನು ಸೇರಿದಂತೆ 95 ಭಾರತೀಯ ಶಂಕಿತರನ್ನೂ ಬಂಧಿಸಲಾಗಿದೆ. ಗಡಿಯ ಬೇಲಿಯನ್ನು ದಾಟಿದ 12 ಪಾಕಿಸ್ತಾನಿ ಪ್ರಜೆಗಳನ್ನು, ವಾಪಾಸು ಕಳಿಸಲಾಗಿದೆ ಎನ್ನಲಾಗಿದೆ.

ತನ್ನ ಸಕ್ರೀಯ ಕಾರ್ಯಾಚರಣೆಯ ಮೂಲಕ ಪಾಕಿಸ್ತಾನದೊಂದಿಗಿನ ಗಡಿ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ ಎಂದು ಗಡಿಭದ್ರತಾ ಪಡೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News