ಭೌಗೋಳಿಕ ನಿರ್ಬಂಧ ರಹಿತ ಸಿಮ್ ಪರಿಚಯಿಸಲಿರುವ ಬಿ ಎಸ್‌ ಎನ್‌ ಎಲ್

Update: 2024-08-11 14:54 GMT

ಹೊಸದಿಲ್ಲಿ : ಕೇಂದ್ರ ಸರಕಾರ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿ ಎಸ್‌ ಎನ್‌ ಎಲ್), ಪಿರೋ ಹೋಲ್ಡಿಂಗ್ಸ್ ಪ್ರೈ.ಲಿಮಿಟೆಡ್‌ನ ಪಾಲುದಾರಿಕೆಯೊಂದಿಗೆ ಅತ್ಯಾಧುನಿಕ ತಂತ್ರಜ್ಞಾನದ ಓವರ್ ದಿ ಏರ್ (ಓಟಿಎ) ಹಾಗೂ ಯೂನಿವರ್ಸಲ್ ಸಿಮ್ (ಯುಎಸ್‌ಐಎಂ) ಪ್ಲ್ಯಾಟ್‌ಫಾರಂಗಳನ್ನು ಅಭಿವೃದ್ಧಿಪಡಿಸಿದೆ.

ಈ ಪ್ಲ್ಯಾಟ್‌ ಫಾರಂಗಳು 4ಜಿ ಹಾಗೂ 5ಜಿಗಳ ತಡೆರಹಿತ ಹೊಂದಿಕೊಳ್ಳುವಿಕೆಗೆ ಅವಕಾಶ ನೀಡುತ್ತದೆ. ದೇಶಾದ್ಯಂತ ಎಲ್ಲಾ ಬಿ ಎಸ್‌ ಎನ್‌ ಎಲ್ ಗ್ರಾಹಕರು ಪಡೆಯಬಹುದಾದ ಉನ್ನತಮಟ್ಟದ ಸಂಪರ್ಕಶೀಲತೆ (ಕನೆಕ್ಟಿವಿಟಿ) ಹಾಗೂ ಉತ್ಕೃಷ್ಟ ಸೇವಾ ಗುಣಮಟ್ಟವನ್ನು ನೀಡಲಿದೆ.

ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಗಳನ್ನು ಆಯ್ಕೆ ಮಾಡಿಕೊಳ್ಳಲು ಹಾಗೂ ಯಾವುದೇ ಭೌಗೋಳಿಕ ನಿರ್ಬಂಧಗಳಿಲ್ಲದ ಸಿಮ್‌ಕಾರ್ಡ್‌ಗಳನ್ನು ಪರಿಚಯಿಸಲು ಬಿ ಎಸ್‌ ಎನ್‌ ಎಲ್ ಮುಂದಾಗಿದೆ.

ಅದೇ ರೀ 4ಜಿ ಹಾಗೂ 5 ಜಿ ನೆಟ್‌ವರ್ಕ್ ಮತ್ತು ಇಂಟರ್‌ನೆಟ್ ಬಳಕೆದಾರರು ಬಿ ಎಸ್‌ ಎನ್‌ ಎಲ್ ಮೊಬೈಲ್ ಸಂಖ್ಯೆಗಳನ್ನು ಆಯ್ಕೆ ಮಾಡಲು ಹಾಗೂ ಯಾವುದೇ ಭೌಗೋಳಿಕ ಆಕ್ಷೇಪಣೆಗಳು, ನಿರ್ಬಂಧಗಳು ಇಲ್ಲದೆಯೇ ಸಿಮ್‌ಕಾರ್ಡ್ ಬದಲಾಯಿಸಲು (ಪೋರ್ಟೆಬಿಲಿಟಿ) ಈ ಪ್ಲ್ಯಾಟ್‌ಫಾರಂ ನೆರವಾಗಲಿದೆ.

ಈ ಉಪಕ್ರಮವು ಬಿ ಎಸ್‌ ಎನ್‌ ಎಲ್ ನೆಟ್‌ವರ್ಕ್ ಸಾಮರ್ಥ್ಯಗಳನ್ನು ವೃದ್ದಿಸಲಿದೆ. ಅಲ್ಲದೆ ಕೇಂದ್ರ ಸರಕಾರದ ಆತ್ಮ ನಿರ್ಬರ ಭಾರತ ಧ್ಯೇಯವನ್ನು ಬೆಂಬಲಿಸುತ್ತದೆ. ಈ ವೇದಿಕೆಯ ಮೂಲಕ ಗ್ರಾಮಾಂತರ ಹಾಗೂ ದುರ್ಗಮ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸಬಲೀಕರಿಸಲಿದೆ ’’ ಎಂದು ಬಿ ಎಸ್‌ ಎನ್‌ ಎಲ್‌ ನ ಚೇರ್‌ಮ್ಯಾನ್ ಹಾಗೂ ಆಡಳಿತ ನಿರ್ದೇಶಕ ಎ.ರಾಬರ್ಟ್ ಜೆರಾರ್ಡ್ ತಿಳಿಸಿದ್ದಾರೆ.

ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಬಿ ಎಸ್‌ ಎನ್‌ ಎಲ್‌ ನ ಪುನರುಜ್ಜೀವನಕ್ಕೆ 89,047 ಕೋಟಿ ರೂ. ಅನುದಾನವನ್ನು ಘೋಷಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News