ದಿಲ್ಲಿ: ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿರುದ್ಧ ಪೋಲಿಸ್ ಕಾರ್ಯಾಚರಣೆ,175 ಶಂಕಿತರು ಪತ್ತೆ

Update: 2024-12-22 14:18 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿರುದ್ಧ ಕಾರ್ಯಾಚರಣೆಯನ್ನು ನಡೆಸುತ್ತಿರುವ ದಿಲ್ಲಿ ಪೋಲಿಸರು ಯಾವುದೇ ಸೂಕ್ತ ದಾಖಲೆಗಳಿಲ್ಲದೆ ವಾಸವಾಗಿರುವ ಸುಮಾರು 175 ಜನರನ್ನು ಪತ್ತೆ ಹಚ್ಚಿದ್ದಾರೆ ಎಂದು ವರದಿಯಾಗಿದೆ.

ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಮತ್ತು ಅವರ ವಿರುದ್ಧ ಅಗತ್ಯ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವ ಉದ್ದೇಶದಿಂದ ಈ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.

ದಿಲ್ಲಿಯ ಔಟರ್ ಡಿಸ್ಟ್ರಿಕ್ಟ್ ಪೋಲಿಸ್ ವ್ಯಾಪ್ತಿಯಲ್ಲಿ 175 ಶಂಕಿತರನ್ನು ಗುರುತಿಸಲಾಗಿದೆ. ಯಾವುದೇ ಸೂಕ್ತ ಭಾರತೀಯ ದಾಖಲೆಗಳಿಲ್ಲದೆ ದೇಶದಲ್ಲಿ ಬಾಂಗ್ಲಾದೇಶಿ ವಲಸಿತ ಅಕ್ರಮ ವಾಸ್ತ್ಯವದ ಕುರಿತು ಕಳವಳಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಔಟರ್ ದಿಲ್ಲಿ ಪೋಲಿಸರು ಅವರನ್ನು ಪತ್ತೆ ಹಚ್ಚಲು ಕಾರ್ಯಾಚರಣೆಯನ್ನು ಆರಂಬಿಸಿದ್ದಾರೆ ಎಂದು ದಿಲ್ಲಿ ಪೋಲಿಸ್ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

ಮನೆ ಮನೆಗೆ ತರಳಿ ತಪಾಸಣೆ ನಡೆಸಲಾಗುತ್ತಿದೆ. ಔಟರ್ ದಿಲ್ಲಿ ಜಿಲ್ಲೆ ವ್ಯಾಪ್ತಿಯಲ್ಲಿ 175 ಶಂಕಿತರು ಪತ್ತೆಯಾಗಿದ್ದಾರೆ ಎಂದು ಅದು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News