ಪೊಂಗಲ್ ಹಿನ್ನೆಲೆಯಲ್ಲಿ ಯುಜಿಸಿ ನೆಟ್ ಪರೀಕ್ಷೆ ದಿನಾಂಕ ಮರುನಿಗದಿಗೆ ಕೇಂದ್ರಕ್ಕೆ ಸಂಸದೆ ಕನಿಮೋಳಿ ಆಗ್ರಹ

Update: 2024-12-22 19:52 IST
Photo of Kanimozhi

 ಕನಿಮೋಳಿ ಕರುಣಾನಿಧಿ | PC : PTI 

  • whatsapp icon

ಚೆನ್ನೈ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರಿಗೆ ರವಿವಾರ ಪತ್ರವನ್ನು ಬರೆದಿರುವ ಡಿಎಂಕೆ ಸಂಸದೆ ಕನಿಮೋಳಿ ಕರುಣಾನಿಧಿ ಅವರು ತಮಿಳುನಾಡಿನಲ್ಲಿ ಪೊಂಗಲ್ ಹಬ್ಬದ ಸಂದರ್ಭದಲ್ಲಿಯೇ ಜ.15 ಮತ್ತು 16ರಂದು ನಿಗದಿಗೊಳಿಸಿರುವ ಯುಜಿಸಿ ನೆಟ್ ಪರೀಕ್ಷೆ ದಿನಾಂಕಗಳನ್ನು ತಕ್ಷಣವೇ ಬದಲಿಸುವಂತೆ ಆಗ್ರಹಿಸಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ತನ್ನ ಪತ್ರದಲ್ಲಿ ಕನಿಮೋಳಿ,‘ಸ್ಥಳೀಯ ಸಂದರ್ಭಗಳ ಪರಿಗಣನೆಯಲ್ಲಿ ಕೊರತೆಯು ಮಾಮೂಲಾಗುತ್ತಿದೆ,ಇತ್ತೀಚಿಗೆ ಪೊಂಗಲ್ ಸಂದರ್ಭದಲ್ಲಿ ನಿಗದಿಗೊಂಡಿದ್ದ ಸಿಎ ಪರೀಕ್ಷೆಯ ದಿನಾಂಕಗಳನ್ನು ಬದಲಿಸಲು ನಾವು ಹೋರಾಟವನ್ನು ನಡೆಸುವಂತಾಗಿತ್ತು. ತಮಿಳುನಾಡಿನ ಭಾವನೆಗಳಿಗೆ ಸಂಪೂರ್ಣ ಸಂವೇದನಾಶೂನ್ಯವಾಗಿರುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಈ ಆಘಾತಕಾರಿ ನಿರ್ಧಾರವನ್ನು ನಾನು ಬಲವಾಗಿ ಖಂಡಿಸುತ್ತೇನೆ’ ಎಂದು ಹೇಳಿದ್ದಾರೆ.

‘ಪೊಂಗಲ್ ಕೇವಲ ಒಂದು ಹಬ್ಬವಲ್ಲ, ಅದು ತಮಿಳು ಹೆಮ್ಮೆ ಮತ್ತು ಅನನ್ಯತೆಯ ಆಚರಣೆಯಾಗಿದೆ. ಇದು ಕೇವಲ ನಿರ್ಲಕ್ಷ್ಯವಲ್ಲ, ಇದು ನಮ್ಮ ಸಾಂಸ್ಕೃತಿಕ ಪರಂಪರೆಗೆ ಉದ್ದೇಶಪೂರ್ವಕ ಅವಮಾನವಾಗಿದೆ. ಕೇಂದ್ರ ಸರಕಾರವು ಮತ್ತೊಮ್ಮೆ ನಮ್ಮ ರಾಜ್ಯ ಮತ್ತು ಅದರ ಜನತೆಯ ಬಗ್ಗೆ ತನ್ನ ಸ್ಪಷ್ಟ ಅಸಡ್ಡೆಯನ್ನು ಬಹಿರಂಗಗೊಳಿಸಿದೆ. ತಮಿಳುನಾಡಿನ ಸಾಂಸ್ಕೃತಿಕ ಮೌಲ್ಯಗಳನ್ನು ಗೌರವಿಸಲು ಮತ್ತು ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಹಾಗೂ ಸಂಪ್ರದಾಯದ ನಡುವೆ ಆಯ್ಕೆಯನ್ನು ಮಾಡಿಕೊಳ್ಳಬೇಕಾದ ಅನಿರ್ವಾಯವನ್ನು ತಪ್ಪಿಸಲು ಪರೀಕ್ಷೆಯ ದಿನಾಂಕಗಳನ್ನು ತಕ್ಷಣವೇ ಮರುನಿಗದಿಗೊಳಿಸುವಂತೆ ನಾನು ಆಗ್ರಹಿಸುತ್ತೇನೆ ’ ಎಂದು ಕನಿಮೋಳಿ ಪತ್ರದಲ್ಲಿ ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News