ಮುಂಬೈ ಸಮುದ್ರ ತೀರದ ಬಳಿ ಸರಕು ಸಾಗಣೆ ಹಡಗು ಡಿಕ್ಕಿ ಹೊಡೆದು ದೋಣಿ ಮುಳುಗಡೆ

Update: 2024-12-29 14:46 GMT

PC : NDTV 

ಮುಂಬೈ: ಸರಕು ಸಾಗಣೆ ಹಡಗೊಂದು ಡಿಕ್ಕಿ ಹೊಡೆದ ಪರಿಣಾಮ ಮೀನುಗಾರಿಕೆ ದೋಣಿಯೊಂದು ಮುಳುಗಿರುವ ಘಟನೆ ರವಿವಾರ ಮುಂಜಾನೆ ಮುಂಬೈನ ಮಲದ್ ಪ್ರದೇಶದಲ್ಲಿರುವ ಮಧ್ ಕೋಳಿವಾಡ್ ನ ಕರಾವಳಿ ತೀರದಲ್ಲಿ ನಡೆದಿದೆ.

ಆದರೆ, ಈ ಘಟನೆಯಲ್ಲಿ ಯಾರಿಗೂ ಗಾಯವಾದ ವರದಿಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಯ ನಂತರ, ಸಮುದ್ರದಲ್ಲಿ ಮುಳುಗಿದ್ದ ದೋಣಿಯನ್ನು ಹೊರ ತೆಗೆದಿರುವ ಇನ್ನಿತರ ಎಂಟು ದೋಣಿಗಳು, ಅದನ್ನು ಸಮುದ್ರ ತೀರಕ್ಕೆ ತಂದಿದೆ ಎಂದೂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಈ ದೋಣಿ ಮಧ್ ಕೋಳಿವಾಡ್ ನ ನಿವಾಸಿ ಹೇಮ್ ದೀಪ್ ಹರೀಶ್ ಚಂದ್ರ ತಿಪ್ರಿ ಎಂಬುವವರಿಗೆ ಸೇರಿದೆ. ದೋಣಿಗೆ ಸರಕು ಸಾಗಣೆ ಹಡಗು ಡಿಕ್ಕಿ ಹೊಡೆದಿದ್ದರಿಂದ, ಅದು ಮುಳುಗಿತ್ತು. ಆದರೆ, ಈ ದೋಣಿಯನ್ನು ಸವತಿ ಎಂದು ಕರೆಯಲಾಗುವ ಸ್ಥಳೀಯ ರಕ್ಷಣಾ ಗುಂಪು ರಕ್ಷಿಸಿದೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ದೋಣಿಯ ಅಂಬಿಗನನ್ನು ಸವತಿ ದೋಣಿಗಳಲ್ಲಿದ್ದವರು ರಕ್ಷಿಸಿದ್ದಾರೆ” ಎಂದೂ ಅವರು ಹೇಳಿದ್ದಾರೆ.

ರಕ್ಷಣಾ ಕಾರ್ಯಾಚರಣೆಗೆ ಕರಾವಳಿ ರಕ್ಷಣಾ ಪಡೆ ಹಾಗೂ ನೌಕಾಪಡೆಯ ಸಿಬ್ಬಂದಿಗಳೂ ನೆರವು ನೀಡಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News