ಜಾತಿ ಗಣತಿ ನ್ಯಾಯದ ದಿಶೆಯಲ್ಲಿ ಮೊದಲ ಹೆಜ್ಜೆ : ರಾಹುಲ್ ಗಾಂಧಿ

Update: 2024-01-28 15:22 GMT

ರಾಹುಲ್ ಗಾಂಧಿ | Photo : ANI

ಹೊಸದಿಲ್ಲಿ : ರಾಜ್ಯದಲ್ಲಿ ಜಾತಿ ಗಣತಿ ಘೋಷಿಸುವ ಮೂಲಕ ನ್ಯಾಯದ ದಿಶೆಯಲ್ಲಿ ಮೊದಲ ಹೆಜ್ಜೆ ಇರಿಸಿರುವುದಕ್ಕಾಗಿ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ ರೆಡ್ಡಿ ಹಾಗೂ ಅವರ ಸರಕಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರವಿವಾರ ಅಭಿನಂದಿಸಿದ್ದಾರೆ.

ದೇಶದ ಏಳಿಗೆಯಲ್ಲಿ ಸಮಾಜದ ಪ್ರತಿಯೊಂದು ವರ್ಗ ಸಮಾನವಾಗಿ ಭಾಗವಹಿಸುವುದನ್ನು ಖಚಿತಪಡಿಸಿಕೊಳ್ಳಲು ಜಾತಿ ಗಣತಿಯೊಂದೇ ಮಾರ್ಗವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

‘‘ಜಾತಿ ಗಣತಿ ನ್ಯಾಯದ ದಿಶೆಯಲ್ಲಿ ಮೊದಲ ಹೆಜ್ಜೆ. ಯಾಕೆಂದರೆ, ಯಾವುದೇ ಸಾಮಾಜಿಕ ಹಾಗೂ ಆರ್ಥಿಕ ಆರೋಗ್ಯವನ್ನು ತಿಳಿಯದೆ, ಅದಕ್ಕೆ ಸೂಕ್ತ ಯೋಜನೆಗಳನ್ನು ರೂಪಿಸಲು ಅಸಾಧ್ಯ. ದೇಶದ ಪ್ರಗತಿಯಲ್ಲಿ ಸಮಾಜದ ಪ್ರತಿಯೊಂದು ವರ್ಗದ ಸಮಾನ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಜಾತಿ ಗಣತಿ ಏಕೈಕ ಮಾರ್ಗವಾಗಿದೆ’’ ಎಂದು ರಾಹುಲ್ ಗಾಂಧಿ ‘ಎಕ್ಸ್’ನ ಹಿಂದಿ ಪೋಸ್ಟ್ನಲ್ಲಿ ಹೇಳಿದ್ದಾರೆ.

ಚುನಾವಣೆಯ ಮುನ್ನ ಜನರಿಗೆ ಭರವಸೆ ನೀಡಿದಂತೆ ತೆಲಂಗಾಣ ಸರಕಾರ ಶೀಘ್ರದಲ್ಲಿ ಜಾತಿ ಗಣತಿ ನಡೆಸಲಿದೆ ಎಂದು ರೇವಂತ ರೆಡ್ಡಿ ಅವರು ಶನಿವಾರ ಹೇಳಿದ್ದರು.

ಅಲ್ಪಸಂಖ್ಯಾತರು, ಹಿಂದುಗಳಿದ ವರ್ಗಗಳು ಹಾಗೂ ಬುಡಕಟ್ಟು ವ್ಯವಹಾರಗಳ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸಭೆ ನಡೆಸಿದ ರೆಡ್ಡಿ, ಜಾತಿ ಗಣತಿ ನಡೆಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದರು ಎಂದು ಅಧಿಕಾರಿಗಳ ಪತ್ರಿಕಾ ಹೇಳಿಕೆ ತಿಳಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News