"ನೀವು ಕೋರ್ಟ್ ಕೊಠಡಿಯಲ್ಲಿದ್ದೀರಿ ಹೊರತು ಕೆಫೆಯಲ್ಲಲ್ಲ”: ʼYeah, Yeahʼ ಎಂದ ವಕೀಲರಿಗೆ ಸಿಜೆಐ ಚಂದ್ರಚೂಡ್ ತರಾಟೆ

Update: 2024-09-30 11:46 GMT

CJI ಡಿವೈ ಚಂದ್ರಚೂಡ್ (Photo: NDTV)

ಹೊಸದಿಲ್ಲಿ: “ನೀವು ಕೋರ್ಟ್ ಕೊಠಡಿಯಲ್ಲಿದ್ದೀರಿ ಹೊರತು ಕೆಫೆಯಲ್ಲಲ್ಲ” ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಪ್ರಕರಣವೊಂದಕ್ಕೆ ಸಂಬಂಧಿಸಿದ ವಿಚಾರಣೆ ವೇಳೆ ವಕೀಲರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.

ವಕೀಲರು 2018ರ ಅರ್ಜಿಯನ್ನು ಉಲ್ಲೇಖಿಸಿ ಅದರಲ್ಲಿ ಅವರು ಭಾರತದ ಮಾಜಿ ಸಿಜೆಐ ರಂಜನ್ ಗೊಗೊಯ್ ಅವರನ್ನು ಪ್ರತಿವಾದಿಯಾಗಿ ಸೇರಿಸಿದ್ದಾರೆ. ಇದು ಆರ್ಟಿಕಲ್ 32ರ ಅಡಿಯಲ್ಲಿ ಸಲ್ಲಿಸಲಾದ ಮನವಿಯೇ? ನ್ಯಾಯಾಧೀಶರನ್ನು ಪ್ರತಿವಾದಿಯಾಗಿ ನೀವು ಹೇಗೆ ಪಿಐಎಲ್ ಸಲ್ಲಿಸುತ್ತೀರಿ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಕೇಳಿದ್ದಾರೆ.

ಇದಕ್ಕೆ ಪ್ರತಿಯಾಗಿ ವಕೀಲರು, ಹೌದು, ಹೌದು (yeah, yeah) ಆಗಿನ ಸಿಜೆಐ ರಂಜನ್ ಗೊಗೊಯ್ ಕ್ಯುರೇಟಿವ್ ಸಲ್ಲಿಸಲು ನನಗೆ ಹೇಳಿದ್ದರು ಎಂದು ಹೇಳಿದ್ದಾರೆ. ಈ ವೇಳೆ ಸಿಜೆಐ ಚಂದ್ರಚೂಡ್, "ಇದು ಕಾಫಿ ಶಾಪ್ ಅಲ್ಲ! ಇದು ಏನು yeah, yeah (ಹೌದು, ಹೌದು)… ನನಗೆ ಇದು ತುಂಬಾ ಅಲರ್ಜಿ, ಇದನ್ನು ಅನುಮತಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

ನ್ಯಾಯಮೂರ್ತಿ ಗೊಗೊಯ್ ಈ ನ್ಯಾಯಾಲಯದ ಮಾಜಿ ನ್ಯಾಯಾಧೀಶರಾಗಿದ್ದರು. ನೀವು ನ್ಯಾಯಾಧೀಶರ ವಿರುದ್ಧ ಈ ರೀತಿ ಮನವಿಯನ್ನು ಸಲ್ಲಿಸಲು ಮತ್ತು ಆಂತರಿಕ ವಿಚಾರಣೆಯನ್ನು ಕೋರಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News