ಲ್ಯಾಟರಲ್ ಎಂಟ್ರಿ: ಕೇಂದ್ರದ ಕ್ರಮಕ್ಕೆ ಎನ್‍ಡಿಎ ಮಿತ್ರಪಕ್ಷದ ಮುಖಂಡ ಪಾಸ್ವಾನ್ ಅಪಸ್ವರ

Update: 2024-08-20 08:06 GMT

ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ (PTI)

ಹೊಸದಿಲ್ಲಿ: ಸರ್ಕಾರದ ಅತ್ಯುನ್ನತ ಹುದ್ದೆಗಳಿಗೆ ಲ್ಯಾಟರಲ್ ಎಂಟ್ರಿ ವಿಧಾನವನ್ನು ಅನುಸರಿಸಿದ ಕೇಂದ್ರದ ಕ್ರಮವನ್ನು ಆಡಳಿತಾರೂಢ ಎನ್‍ಡಿಎ ಮಿತ್ರಪಕ್ಷದ ಮುಖಂಡ ಹಾಗೂ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ತೀವ್ರ ಅಪಸ್ವರ ವ್ಯಕ್ತಪಡಿಸಿದ್ದಾರೆ.

ಎಲ್ಲ ಸರ್ಕಾರಿ ಹುದ್ದೆಗಳಿಗೆ ಮಾಡುವ ನೇಮಕಾತಿಗಳು ಮೀಸಲಾತಿಯ ನಿಯಮಗಳಿಗೆ ಅನುಸಾರವಾಗಿರಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

ಎನ್‍ಡಿಎ ಮಿತ್ರಪಕ್ಷವಾಗಿರುವ ಲೋಕ ಜನಶಕ್ತಿ ಪಾರ್ಟಿ (ರಾಮ್ ವಿಲಾಸ್) ಮುಖ್ಯಸ್ಥರಾಗಿರುವ ಅವರು, "ಇಂಥ ನೇಮಕಾತಿ ವಿಚಾರದಲ್ಲಿ ನನ್ನ ಪಕ್ಷದ ನಿಲುವು ಸ್ಪಷ್ಟ. ಸರ್ಕಾರಿ ನೇಮಕಾತಿ ವೇಳೆ, ಮೀಸಲಾತಿ ನಿಯಮಗಳನ್ನು ಅನುಸರಿಸಬೇಕು. ನಾನು ಸರ್ಕಾರದ ಭಾಗವಾಗಿರುವುದರಿಂದ ಹಾಗೂ ನಾನು ಈ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ವೇದಿಕೆ ಇರುವ ಕಾರಣ ಇದೀಗ ಬಹಿರಂಗವಾಗುತ್ತಿರುವ ಮಾಹಿತಿ ನಿಜಕ್ಕೂ ಆತಂಕಕಾರಿ" ಎಂದು ಅವರು ಬಣ್ಣಿಸಿದ್ದಾರೆ.

"ನನ್ನ ಪಕ್ಷದ ಪರವಾಗಿ ಮಾತನಾಡುತ್ತಿದ್ದು, ಇಂಥ ವಿಧಾನಕ್ಕೆ ನಾವು ಖಂಡಿತವಾಗಿಯೂ ಒಲವು ತೋರುವುದಿಲ್ಲ. ಇದು ಸಂಪೂರ್ಣ ತಪ್ಪು. ಸರ್ಕಾರದ ಮುಂದೆ ಈ ವಿಚಾರವನ್ನು ಎತ್ತುತ್ತೇನೆ" ಎಂದು ಪಾಸ್ವಾನ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News