ಮಾಜಿ ಸಿಎಂ ಜಗನ್ ರೆಡ್ಡಿ ಪತ್ನಿ ವಿರುದ್ಧ ಅವಹೇಳನಕಾರಿ ಟೀಕೆ : ಯೂಟ್ಯೂಬರ್ ಬಂಧನ

Update: 2025-04-12 22:01 IST
ಮಾಜಿ ಸಿಎಂ ಜಗನ್ ರೆಡ್ಡಿ ಪತ್ನಿ ವಿರುದ್ಧ ಅವಹೇಳನಕಾರಿ ಟೀಕೆ : ಯೂಟ್ಯೂಬರ್ ಬಂಧನ

pc : x  \ @jsuryareddy

  • whatsapp icon

ವಿಶಾಖಪಟ್ಟಣಂ: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ್ ರೆಡ್ಡಿ ಅವರ ಪತ್ನಿ ವೈ.ಎಸ್.ಭಾರತಿ ವಿರುದ್ಧ ಅಸಭ್ಯ ಹಾಗೂ ಅವಹೇಳನಕಾರಿ ಟೀಕೆಗಳನ್ನು ಮಾಡಿದ ಆರೋಪಕ್ಕೆ ಸಂಬಂಧಿಸಿ ಆಂಧ್ರಪ್ರದೇಶ ಪೊಲೀಸರು ತೆಲುಗುದೇಶಂ ಪಕ್ಷದ ಕಾರ್ಯಕರ್ತ ಹಾಗೂ ಯೂಟ್ಯೂಬರ್ ಚೆಬ್ರೊಲು ಕಿರಣ್ ಕುಮಾರ್ ನನ್ನು ಬಂಧಿಸಿದ್ದಾರೆ.

ಯೂಟ್ಯೂಬ್ ಚಾನೆಲ್ ಪಾಯಿಂಟ್ ಬ್ಲಾಂಕ್ ಟಿವಿಗೆ ನೀಡಿದ ಸಂದರ್ಭದಲ್ಲಿ ಕಿರಣ್ ಕುಮಾರ್ ಈ ಅವಹೇಳನಕಾರಿ ಟೀಕೆಗಳನ್ನು ಮಾಡಿದ್ದನೆನ್ನಲಾಗಿದೆ. ಗುರುವಾರ ಬಂಧಿತನಾದ ಆತನನ್ನು ತೆಲುಗುದೇಶಂ ಪಕ್ಷವು ಅಮಾನತುಗೊಳಿಸಿದೆ. ಕಿರಣ್ ಕುಮಾರ್ ನ ಹೇಳಿಕೆಯು ಅಸಭ್ಯತೆಯಿಂದ ಕೂಡಿದೆಯೆಂದು ತೆಲುಗುದೇಶಂ ಪ್ರತಿಕ್ರಿಯಿಸಿದೆ.

ಆಟ್ಮಕೂರ್ ಗ್ರಾಮದ ನಿವಾಸಿಗಳು ನೀಡಿದ ದೂರಿನ ಆಧಾರದಲ್ಲಿ ಆತನನ್ನು ಬಂಧಿಸಲಾಗಿದೆ. ಆತನ ವಿರುದ್ಧ ಮಾನಹಾನಿ, ಶತ್ರುತ್ವಕ್ಕೆ ಉತ್ತೇಜನ ಹಾಗೂ ಸಾರ್ವಜನಿಕ ವ್ಯಕ್ತಿಗಳ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಿದ ಆರೋಪಗಳಿಗೆ ಸಂಬಂಧಸಿ ಭಾರತೀಯ ನ್ಯಾಯಶಾಸ್ತ್ರ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಲಾಗಿದೆ.

ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಲೈಂಗಿಕತೆಗೆ ಸಂಬಂಧಿಸಿದ ವಿಷಯಳ ಪ್ರಕಟಣೆ ಹಾಗೂ ಪ್ರಸಾರವನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸುವ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67(ಎ) ಅಡಿಯಲ್ಲಿಯೂ ಆತನ ವಿರುದ್ಧ ದೋಷಾರೋಪ ಹೊರಿಸಲಾಗಿದೆ.

ತನ್ನ ಹೇಳಿಕೆಗಳಿಗಾಗಿ ಕಿರಣ್ ಕುಮಾರ್ ಕ್ಷಮೆಯಾಚಿಸಿದ್ದಾನೆ. ಕ್ಷಣಿಕ ಆವೇಶದಲ್ಲಿ ತಾನು ಈ ಹೇಳಿಕೆಯನ್ನು ನೀಡಿದ್ದಾಗಿ ಆತ ಹೇಳಿದ್ದಾನೆಂದು ಆಂಗ್ಲ ದೈನಿಕವೊಂದು ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News