12 ಸ್ಥಳಗಳಲ್ಲಿ ಸಿಬಿಐ ದಾಳಿ; ಡಿಜಿಟಲ್ ಅರೆಸ್ಟ್ ಪ್ರಕರಣದ ನಾಲ್ವರು ರೂವಾರಿಗಳ ಬಂಧನ

Update: 2025-04-15 21:15 IST
CBI

ಸಾಂದರ್ಭಿಕ ಚಿತ್ರ | PTI 

  • whatsapp icon

ಹೊಸದಿಲ್ಲಿ: ಡಿಜಿಟಲ್ ಅರೆಸ್ಟ್ ಪ್ರಕರಣಕ್ಕೆ ಸಂಬಂಧಿಸಿ ದೇಶಾದ್ಯಂತ 12 ಸ್ಥಳಗಳಲ್ಲಿ ದಾಳಿ ನಡೆಸಿದ್ದು, ನಾಲ್ವರು ರೂವಾರಿಗಳನ್ನು ಬಂಧಿಸಲಾಗಿದೆ ಎಂದು ಸಿಬಿಐ ಮಂಗಳವಾರ ತಿಳಿಸಿದೆ.

ಈ ಸೈಬರ್ ಅರೋಪಿಗಳು ಕಾನೂನು ಜಾರಿ ಅಧಿಕಾರಿಗಳೆಂದು ಹೇಳಿಕೊಂಡು ಓರ್ವನಿಂದ ಮೂರು ತಿಂಗಳಲ್ಲಿ 42 ಬಾರಿ 7.67 ಕೋಟಿ ರೂ. ಸುಲಿಗೆ ಮಾಡಿದ್ದಾರೆ ಎಂದು ಅದು ತಿಳಿಸಿದೆ.

ರಾಜಸ್ಥಾನದ ಝುಂಝುನುವಿನಲ್ಲಿರುವ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾದ ಈ ಪ್ರಕರಣವನ್ನು ರಾಜಸ್ಥಾನ ಸರಕಾರದ ಮನವಿಯ ಹಿನ್ನೆಲೆಯಲ್ಲಿ ಸಿಬಿಐ ಕೈಗೆತ್ತಿಕೊಂಡಿತ್ತು.

ವಿವಿಧ ಕಾನೂನು ಜಾರಿ ನಿರ್ದೇಶನಾಲಯದ ಸಂಸ್ಥೆಗಳ ಅಧಿಕಾರಿಗಳೆಂದು ಹೇಳಿಕೊಂಡು ಸೈಬರ್ ವಂಚಕರು ಸಂತ್ರಸ್ತನನ್ನು ಡಿಜಿಟಲ್ ಎರೆಸ್ಟ್ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಬಿಐಯ ಕಾರ್ಯಾಚರಣೆ ಚಕ್ರಾ-ವಿಯ ಭಾಗವಾಗಿ ಮುಂಬೈ ಹಾಗೂ ಮೊರದಾಬಾದ್‌ನಿಂದ ತಲಾ ಇಬ್ಬರನ್ನು ಬಂಧಿಸಲಾಗಿದೆ. ಉತ್ತರಪ್ರದೇಶದ ಮೊರದಾಬಾದ್, ಸಂಭಲ್, ಮಹಾರಾಷ್ಟ್ರದ ಮುಂಬೈ, ರಾಜಸ್ಥಾನದ ಜೈಪುರ ಹಾಗೂ ಪಶ್ಚಿಮಬಂಗಾಳದ ಕೃಷ್ಣನಗರ್‌ನಲ್ಲಿ ವ್ಯಾಪಕ ಅನುಸರಣಾ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅದು ತಿಳಿಸಿದೆ.  

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News