ತನ್ನ ಕೊಠಡಿಗೆ CPWD, CISF ಅಧಿಕಾರಿಗಳ ಅನಧಿಕೃತ ಪ್ರವೇಶ ಮಾಡಿದ್ದಾರೆಂದು ರಾಜ್ಯಸಭಾಧ್ಯಕ್ಷರಿಗೆ ಪತ್ರ ಬರೆದ ಮಲ್ಲಿಕಾರ್ಜುನ ಖರ್ಗೆ

Update: 2024-10-04 17:52 IST
ತನ್ನ ಕೊಠಡಿಗೆ CPWD, CISF ಅಧಿಕಾರಿಗಳ ಅನಧಿಕೃತ ಪ್ರವೇಶ ಮಾಡಿದ್ದಾರೆಂದು ರಾಜ್ಯಸಭಾಧ್ಯಕ್ಷರಿಗೆ ಪತ್ರ ಬರೆದ ಮಲ್ಲಿಕಾರ್ಜುನ ಖರ್ಗೆ

ಮಲ್ಲಿಕಾರ್ಜುನ ಖರ್ಗೆ (PTI)

  • whatsapp icon

ಹೊಸದಿಲ್ಲಿ: ರಾಜ್ಯಸಭೆಯಲ್ಲಿನ ತಮ್ಮ ಸಂಸದರ ಕೊಠಡಿಗೆ ಅನುಮತಿ ಇಲ್ಲದೆ ಅಥವಾ ಮುಂಚಿತ ಮಾಹಿತಿ ಇಲ್ಲದೆ ಸಿಪಿಡಬ್ಲ್ಯೂಡಿ, ಸಿಐಎಸ್ಎಫ್ ಮತ್ತು ಟಾಟಾ ಪ್ರಾಜೆಕ್ಟ್ಸ್ ಅಧಿಕಾರಿಗಳು ಪ್ರವೇಶಿಸಿರುವುದನ್ನು ತೀವ್ರವಾಗಿ ಆಕ್ಷೇಪಿಸಿರುವ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಈ ಕುರಿತು ಗುರುವಾರ ರಾಜ್ಯಸಭಾಧ್ಯಕ್ಷ ಜಗದೀಪ್ ಧನಕರ್ ಅವರಿಗೆ ಪತ್ರ ಬರೆದಿದ್ದಾರೆ.

“ಈ ಒಳನುಸುಳುವಿಕೆ ತೀರಾ ಅಗೌರವಯುತವಾಗಿದ್ದು, ಸಂಪೂರ್ಣವಾಗಿ ಅಸ್ವೀಕಾರಾರ್ಹವಾಗಿದೆ” ಎಂದು ಅವರು ಕಿಡಿ ಕಾರಿದ್ದಾರೆ.

ರಾಜ್ಯಸಭಾ ಸಂಸದ ಮತ್ತು ರಾಜ್ಯಸಭಾ ವಿರೋಧ ಪಕ್ಷದ ನಾಯಕನ ಆಧಾರದಲ್ಲಿ ನನಗೆ ಮಂಜೂರು ಮಾಡಲಾಗಿರುವ ಕೊಠಡಿಗೆ ನಿಯಮಗಳು ಹಾಗೂ ನನ್ನ ಹಕ್ಕುಗಳನ್ನು ನಿರ್ದಯವಾಗಿ ಉಲ್ಲಂಘಿಸಿ ಪ್ರವೇಶಿಸಿರುವುದು ಅಸಾಧಾರಣ ಬೆಳವಣಿಗೆಯಾಗಿದೆ” ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಅನಧಿಕೃತ ಪ್ರವೇಶಕ್ಕೆ ಅನುಮತಿ ನೀಡಿದವರು ಯಾರು ಎಂಬುದನ್ನು ತಿಳಿಯಲು ಬಯಸುತ್ತೇನೆ ಎಂದು ಹೇಳಿರುವ ಖರ್ಗೆ, ವಿರೋಧ ಪಕ್ಷದ ನಾಯಕರ ಘನತೆಯನ್ನು ತಗ್ಗಿಸುವಂಥ ಇಂತಹ ಘಟನೆಗಳು ಭವಿಷ್ಯದಲ್ಲಿ ನಡೆಯದಂತೆ ಖಾತರಿಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಗದೀಪ್ ಧನಕರ್ ಅವರನ್ನು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News