ವಿಪಕ್ಷಗಳ ʼಜಸ್ಟಿಸ್‌ ಫಾರ್‌ ಮಣಿಪುರ್ʼ ಕೂಗಿನ ನಡುವೆ ತಮ್ಮ ಭಾಷಣ ಆರಂಭಿಸಿದ ಪ್ರಧಾನಿ ಮೋದಿ

Update: 2024-07-02 11:39 GMT
Screengrab:X/ANI

ಹೊಸದಿಲ್ಲಿ: ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ಇಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣ ಆರಂಭಿಸುತ್ತಿದ್ದಂತೆಯೇ ವಿಪಕ್ಷಗಳು “ಜಸ್ಟಿಸ್‌ ಫಾರ್‌ ಮಣಿಪುರ್” ಘೋಷಣೆಗಳನ್ನು ಮೊಳಗಿಸಿವೆ.

ಪ್ರಧಾನಿ ಈ ಘೋಷಣೆಗಳ ನಡುವೆ ತಮ್ಮ ಭಾಷಣ ಮುಂದುವರಿಸಿದಾಗ ವಿಪಕ್ಷ ಸದಸ್ಯರು ಸದನದ ಅಂಗಳಕ್ಕೆ ಬಂದು ಮಣಿಪುರಕ್ಕೆ ನ್ಯಾಯಕ್ಕಾಗಿ ಆಗ್ರಹಿಸಿದರು ಹಾಗೂ ಸರ್ವಾಧಿಕಾರವನ್ನು ಸಹಿಸಲಾಗದು ಎಂಬ ಘೋಷಣೆಗಳನ್ನು ಮೊಳಗಿಸಿದರು.

ಈ ಗದ್ದಲದ ನಡುವೆ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಕೆಲ ಕಾಲ ನಿಲ್ಲಿಸಬೇಕಾಗಿ ಬಂತು. ಸದಸ್ಯರನ್ನು ಶಾಂತವಾಗಿಸುವ ಸ್ಪೀಕರ್‌ ಯತ್ನ ಕೈಗೂಡಲಿಲ್ಲ.

ಕೇಂದ್ರದ ನೀತಿಗಳು ದೇಶ ಮೊದಲು ಎಂಬ ತತ್ವವನ್ನಾಧರಿಸಿವೆ, ಎನ್‌ಡಿಎ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಹೋರಾಡಲಿದೆ ಎಂದು ಹೇಳಿದ ಪ್ರಧಾನಿ ತಮ್ಮ ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಘೋಷಣೆಯನ್ನು ಪುನರುಚ್ಛರಿಸಿದರು.

ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ಚುನಾವಣೆಯಲ್ಲಿ ತಮ್ಮ ಪಕ್ಷ ಹಾಗೂ ಎನ್‌ಡಿಎ ಸತತ ಮೂರು ಬಾರಿ ಸಾಧಿಸಿದ ವಿಜಯವನ್ನು ಶ್ಲಾಘಿಸಿದ ಅವರು “ಸುಳ್ಳುಗಳನ್ನು ಹರಡುವ ಯತ್ನಗಳ ಹೊರತಾಗಿಯೂ ಸೋತ ಕೆಲವರ (ವಿಪಕ್ಷಗಳ) ನೋವು ನನಗೆ ಅರ್ಥವಾಗುತ್ತದೆ. ಅವರು ನಮ್ಮನ್ನು ಮೂರನೇ ಅವಧಿಗೆ ಆಯ್ಕೆ ಮಾಡಿರುವುದು ಹೆಮ್ಮೆಯ ವಿಚಾರ,” ಎಂದು ಹೇಳಿದರು.

ಮೊದಲ ಬಾರಿ ಆಯ್ಕೆಯಾದ ಸಂಶದರ ಶಿಸ್ತುಬದ್ಧ ವರ್ತನೆಯನ್ನೂ ಈ ಸಂದರ್ಭ ಅವರು ಶ್ಲಾಘಿಸಿ ಈ ಮೂಲಕ ಕಳೆದೆರಡು ದಿನಗಳಿಂದ ಸಂಸತ್ತಿನಲ್ಲಿ ಘೋಷಣೆ ಮೊಳಗಿಸುತ್ತಿರುವ ವಿಪಕ್ಷಗಳನ್ನು ಪರೋಕ್ಷವಾಗಿ ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News