ಕೇಂದ್ರದ ಆರೋಗ್ಯ ಅಭಿಯಾನದಡಿ 5 ಕೋಟಿ ಆಯುಷ್ಮಾನ್ ಭಾರತ್ ಖಾತೆಗಳ ಸೃಷ್ಟಿ

Update: 2023-12-29 17:35 GMT

ಹೊಸದಿಲ್ಲಿ: ಈಗ ನಡೆಯುತ್ತಿರುವ ‘ಆಯುಷ್ಮಾನ್ಭವ’ ಅಭಿಯಾನದಡಿ ವಾರ್ಷಿಕವಾಗಿ ಪ್ರತಿ ಕುಟುಂಬಕ್ಕೆ 5 ಲಕ್ಷಕ್ಕಿಂತ ಕಡಿಮೆ ವರಮಾನವಿರುವ ಕುಟುಂಬಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ದೊರಕಿಸಿಕೊಡುವ 4.4 ಕೋಟಿ ಗೂ ಅಧಿಕ ಆಯುಷ್ಮಾನ್ ಕಾರ್ಡ್ ಅರ್ಹ ಕುಟುಂಬಗಳಿಗೆ ವಿತರಿಸಲಾಗಿದೆಯೆಂದು ಕೇಂದ್ರ ಸರಕಾರ ತಿಳಿಸಿದೆ.

ಈ ಅಭಿಯಾನದಲ್ಲಿ ಡಿಸೆಂಬರ್ 28ರವರೆಗೆ, 5 ಕೋಟಿಗೂ ಅಧಿಕ ಆಯುಷ್ಮಾನ್ ಭಾರತ ಆರೋಗ್ಯ ಖಾತೆಗಳನ್ನು (ಎಬಿಎಚ್ಎ) ಸೃಷ್ಟಿಸಲಾಗಿದೆಯೆಂದು ಕೇಂದ್ರ ಆರೋಗ್ಯ ಸಚಿವಾಲಯವು ಶುಕ್ರವಾರ ತಿಳಿಸಿದೆ.

ಆಯುಷ್ಮಾನ್ ಭವ ಅಭಿಯಾನದಡಿ 13.8 ಲಕ್ಷಕ್ಕೂ ಅಧಿಕ ಆಯುಷ್ಮಾನ್ ಆರೋಗ್ಯ ಮೇಳಗಳು ಹಾಗೂ ಸಾಮುದಾಯಿಕ ಆರೋಗ್ಯ ಕೇಂದ್ರ ಮೇಳಗಳನ್ನು ನಡೆಸಲಾಗಿದೆ.

ಈ ಮೇಳಗಳಲ್ಲಿ 9,21,783 ಸ್ವಾಸ್ಥ್ಯ,ಯೋಗ, ಧ್ಯಾನ ಶಿಬಿರಗಳನ್ನು ನಡೆಸಲಾಗಿದೆ ಹಾಗೂ 1.02 ಲಕ್ಷಕ್ಕೂ ಅಧಿಕ ದೂರವಾಣಿ ಸಮಾಲೋಚನೆಗಳನ್ನು ಆಯೋಜಿಸಲಾಗಿದೆ. ಜೊತೆಗೆ 6.4 ಕೋಟಿ ಜನರು ಉಚಿತ ಔಷಧಿಗಳನ್ನು ಪಡೆದಿದ್ದಾರೆ ಹಾಗೂ 5.1 ಕೋಟಿ ಜನರು ಉಚಿತ ಡಯಾಗ್ನಾಸ್ಟಿಕ್(ದೇಹಪರೀಕ್ಷೆ) ಸೇವೆಗಳನ್ನು ಪಡೆದುಕೊಂಡಿದ್ದಾರೆ.

ಜೊತೆಗೆ 74,04,356 ಜನರು ಆಯುಷ್ ಸೇವೆಗಳನ್ನು ಹಾಗೂ 10,99,63,881 ಮಂದಿ ಜೀವನಶೈಲಿ ಚಟುವಟಿಕೆಗಳ ಬಗ್ಗೆ ಆಪ್ತ ಸಮಾಲೋಚನೆಗಳನ್ನು ಪಡೆದುಕೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News