ಚತ್ತೀಸ್‌ ಗಡ: ನಕ್ಸಲೀಯರ ಜೊತೆ ಗುಂಡಿನ ಕಾಳಗ: ಸಿಆರ್‌ಪಿಎಫ್ ಯೋಧ ಸಾವು

Update: 2023-12-17 18:28 GMT

ಸಾಂದರ್ಭಿಕ ಚಿತ್ರ (PTI)

ರಾಯಪುರ: ಚತ್ತೀಸ್‌ ಗಡದ ಸುಕ್ಮಾ ಜಿಲ್ಲೆಯಲ್ಲಿ ರವಿವಾರ ಭದ್ರತಾ ಸಿಬ್ಬಂದಿ ಹಾಗೂ ನಕ್ಸಲೀಯರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್)ಯ ಸಬ್ ಇನ್ಸ್‌ಪೆಕ್ಟರ್‌ ಮೃತಪಟ್ಟಿದ್ದಾರೆ ಹಾಗೂ ಕಾನ್ಸ್‌ಟೇಬಲ್‌ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಆರ್ ಪಿ ಎಫ್ ನ 165ನೇ ಬೆಟಾಲಿಯನಿನ ತಂಡ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿದ ಸಂದರ್ಭ ಜಾಗರ್ಗುಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರವಿವಾರ ಬೆಳಗ್ಗೆ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಬೆಳಗ್ಗೆ ಸುಮಾರು 7 ಗಂಟೆಗೆ ಬೆದ್ರೆ ಕ್ಯಾಂಪ್ ನಿಂದ ಉರ್ಸಂಗಲ್ ಗ್ರಾಮದ ಕಡೆಗೆ ಕಾರ್ಯಾಚರಣೆ ನಡೆಯಿತು ಎಂದು ಅವರು ಹೇಳಿದ್ದಾರೆ.

ಈ ಕಾರ್ಯಾಚರಣೆ ಸಂದರ್ಭ ಭದ್ರತಾ ಸಿಬ್ಬಂದಿ ಹಾಗೂ ನಕ್ಸಲೀಯರ ನಡುವೆ ಗುಂಡಿನ ಚಕಮಕಿ ನಡೆಯಿತು. ಇದರಿಂದ ಸಬ್ ಇನ್ಸ್‌ಪೆಕ್ಟರ್‌ ಸುಧಾಕರ್ ರೆಡ್ಡಿ ಮೃತಪಟ್ಟರು ಹಾಗೂ ಕಾನ್ಸ್‌ಟೇಬಲ್‌ ರಾಮು ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News