ಇವಿಎಮ್‌ಗೆ ಹಾನಿ:ಬಿಜೆಪಿ ಅಭ್ಯರ್ಥಿಯ ಬಂಧನ

Update: 2024-05-26 17:18 GMT

 ಪ್ರಶಾಂತ ಜಗದೇವ | PC : Odisha Assembly website

ಭುವನೇಶ್ವರ : ವಿದ್ಯುನ್ಮಾನ ಮತದಾನ ಯಂತ್ರ (ಇವಿಎಂ)ಕ್ಕೆ ಹಾನಿಯನ್ನುಂಟು ಮಾಡಿದ ಆರೋಪದಲ್ಲಿ ಹಾಲಿ ಚಿಲಿಕಾ ಶಾಸಕ ಹಾಗೂ ಖುರ್ದಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಶಾಂತ ಜಗದೇವ ಅವರನ್ನು ಶನಿವಾರ ಒಡಿಶಾ ಪೋಲಿಸರು ಬಂಧಿಸಿದ್ದಾರೆ.

ಘಟನೆಯಿಂದ ವಿಧಾನಸಭಾ ಚುನಾವಣೆಗಳ ಆರನೇ ಹಂತದ ಮತದಾನಕ್ಕೆ ವ್ಯತ್ಯಯವುಂಟಾಗಿತ್ತು. ಒಡಿಶಾದಲ್ಲಿ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳು ಏಕಕಾಲದಲ್ಲಿ ನಡೆಯುತ್ತಿವೆ.

ಶನಿವಾರ ಅಪರಾಹ್ನ ಜಗದೇವ ಮತ್ತು ಅವರ ಬೆಂಬಲಿಗರು ನೆರೆಯ ಬೇಗುನಿಯಾ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದಕ್ಕೆ ಹೋಗಿದ್ದಾಗ ಅಲ್ಲಿ ಚುನಾವಣಾಧಿಕಾರಿ ಜೊತೆ ವಾಗ್ವಾದ ನಡೆಸಿದ್ದರು. ಬಳಿಕ ಮತಗಟ್ಟೆಯಿಂದ ಹೊರಕ್ಕೆ ಹೋಗುವ ಮುನ್ನ ಜಗದೇವ ಇವಿಎಮ್‌ಗೆ ಹಾನಿಯನ್ನುಂಟು ಮಾಡಿದ್ದರು ಎನ್ನಲಾಗಿದೆ. ಪೋಲಿಸರು ಅವರ ವಾಹನವನ್ನು ಅಡ್ಡಗಟ್ಟಿ ಅವರನ್ನು ವಶಕ್ಕೆ ತೆಗದುಕೊಂಡಿದ್ದರು.

ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿರುವ ಜಗದೇವ,ಇವಿಎಂ ಆಕಸ್ಮಿಕವಾಗಿ ನೆಲಕ್ಕೆ ಬಿದ್ದು ಹಾನಿಗೀಡಾಗಿದೆ ಎಂದು ಹೇಳಿಕೊಂಡಿದ್ದಾರೆ.

ತನ್ನನ್ನು ಸುಳ್ಳು ಆರೋಪದಲ್ಲಿ ಸಿಲುಕಿಸಲಾಗುತ್ತಿದೆ ಎಂದು ದೂರಿಕೊಂಡು ಪೊಲೀಸ್ ಠಾಣೆಯೊಳಗೆ ಪ್ರತಿಭಟನೆ ನಡೆಸಿದ್ದರು.

ಬಿಜೆಡಿಯಿಂದ ಎರಡು ಬಾರಿ ಶಾಸಕರಾಗಿರುವ ಜಗದೇವ ಕಳೆದ ಮಾರ್ಚ್‌ನಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News