ವಾಂಗ್ಚುಕ್ ಭೇಟಿಗೆ ದಿಲ್ಲಿ ಮುಖ್ಯಮಂತ್ರಿ ಆತಿಶಿಗೆ ಅನುಮತಿ ನಿರಾಕರಣೆ

Update: 2024-10-01 15:11 GMT

ಸೋನಮ್ ವಾಂಗ್ಚುಕ್‌ , ಆತಿಶಿ | PC : PTI 

ಹೊಸದಿಲ್ಲಿ : ಬಾವನ ಪೊಲೀಸ್ ಠಾಣೆಯಲ್ಲಿರುವ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್‌ರನ್ನು ಭೇಟಿಯಾಗಲು ತನಗೆ ಪೊಲೀಸರು ಅನುಮತಿ ನೀಡಲಿಲ್ಲ ಎಂದು ದಿಲ್ಲಿ ಮುಖ್ಯಮಂತ್ರಿ ಆತಿಶಿ ಮಂಗಳವಾರ ಆರೋಪಿಸಿದ್ದಾರೆ.

‘‘ನಾನು ಸೋನಮ್ ವಾಂಗ್ಚುಕ್‌ರನ್ನು ಭೇಟಿಯಾಗಲು ಇಲ್ಲಿಗೆ ಬಂದೆ. ಅವರು ಪರಿಸರವಾದಿ ಮತ್ತು ಶಿಕ್ಷಣ ತಜ್ಞ. ಅವರು ಎಲ್ಲರಿಗೂ ಗೊತ್ತು. ಅವರು ಲಡಾಖ್ ಜನತೆಯ ಧ್ವನಿಯನ್ನು ಎತ್ತುವುದಕ್ಕಾಗಿ 150 ಮಂದಿಯೊಂದಿಗೆ ದಿಲ್ಲಿಗೆ ಬರುತ್ತಿದ್ದರು. ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಅವರನ್ನು ದಿಲ್ಲಿ ಗಡಿಯಲ್ಲಿ ಬಂಧಿಸಿತು. ಲಡಾಖ್ ಜನತೆ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕೇಳುತ್ತಿದ್ದಾರೆ. ಅವರಿಗೆ ಲೆಫ್ಟಿನೆಂಟ್ ಜನರಲ್ ಆಡಳಿತ ಸಾಕಾಗಿದೆ. ಪೊಲೀಸ್ ಠಾಣೆಯ ಒಳಗೆ ಹೋಗಲು ನನಗೆ ಅವಕಾಶ ನೀಡಲಾಯಿತಾದರೂ, ಅವರನ್ನು ಭೇಟಿಯಾಗಲು ನನಗೆ ಅನುಮತಿ ಸಿಗಲಿಲ್ಲ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಆತಿಶಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News