ದಿಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ ಬಿಹಾರದಲ್ಲಿ ಪರಿಣಾಮ ಬೀರದು: ಲಾಲು ಪ್ರಸಾದ್ ಯಾದವ್
photo | PTI
ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶವು ಬಿಹಾರದ ವಿಧಾನಸಭಾ ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ಆರ್ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಗುರುವಾರ ತಳ್ಳಿಹಾಕಿದ್ದಾರೆ.
ಬಿಹಾರದಲ್ಲಿ ಬಿಜೆಪಿಗೆ ಸರಕಾರ ರಚಿಸುವ ಸಾಧ್ಯತೆಯಿಲ್ಲವೆಂದು ಅವರು ಹೇಳಿದ್ದಾರೆ. ಬಿಜೆಪಿಯ ನಿಲುವು ಏನೆಂಬುದನ್ನು ಜನರು ಅರಿತುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಪಾಟ್ನಾದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘‘ ಅವರು ಹೇಗೆ ಸರಕಾರ ರಚಿಸಲು ಸಾಧ್ಯ? ನಾವು ಇಲ್ಲಿರುವಾಗ ಸರಕಾರವನ್ನು ರಚಿಸಲು ಸಾಧ್ಯವೇ? ಬಿಜೆಪಿಯ ಧೋರಣೆ ಏನೆಂಬುದನ್ನು ಜನರು ಗುರುತಿಸಿದ್ದಾರೆ ’’ಎಂದರು.
ಡಬಲ್ ಎಂಜಿನ್ ಸರಕಾರದಿಂದ ಬಿಹಾರವು ಪ್ರಯೋಜನ ಪಡೆಯುತ್ತಿ ಹಾಗೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟವು ದಿಲ್ಲಿಗಿಂತಲೂ ಉತ್ತಮ ನಿರ್ವಹಣೆಯನ್ನು ಪ್ರದರ್ಶಿಸಲಿದೆ ಎಂದು ಜೆಡಿಯು ಸಂಸದ ಸಂಜಯ್ ಕುಮಾರ್ ಝಾ ನೀಡಿದ ಹೇಳಿಕೆಗೆ, ಲಾಲು ಪ್ರಸಾದ್ ಹೀಗೆ ಪ್ರತಿಕ್ರಿಯಿಸಿದ್ದಾರೆ.