ಮಹಾರಾಷ್ಟ್ರ| ಅಲ್ಯೂಮಿನಿಯಂ ಹಾಳೆ ತಯಾರಿಸುವ ಕಾರ್ಖಾನೆಯಲ್ಲಿ ಬೆಂಕಿ ಅವಘಡ; ಐವರು ಮೃತ್ಯು, ಹಲವರಿಗೆ ಗಾಯ

PC : PTI
Sನಾಗಪುರ: ನಾಗಪುರ ಜಿಲ್ಲೆಯ ಅಮ್ರೇಡ್ ಎಂಐಡಿಸಿಯಲ್ಲಿರುವ ಅಲ್ಯೂಮಿನಿಯಂ ಹಾಳೆ ತಯಾರಿಕಾ ಘಟಕದಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಐವರು ಸಾವನ್ನಪ್ಪಿದ್ದಾರೆ.
ಈ ಬೆಂಕಿ ಅವಘಡದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮೃತಪಟ್ಟಿದ್ದಾರೆ. ಆರಂಭದಲ್ಲಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾದ ಮೂವರು ಸಾವನ್ನಪ್ಪಿರುವುದು ಶನಿವಾರ ದೃಢಪಟ್ಟಿದೆ ಎಂದು ನಾಗಪುರ ಗ್ರಾಮೀಣ ಪೊಲೀಸ್ ಅಧೀಕ್ಷಕ (ಎಸ್ಪಿ)ಹರ್ಷ ಪೊದ್ದಾರ್ ಶನಿವಾರ ತಿಳಿಸಿದ್ದಾರೆ.
ಅಮ್ರೇಡ್ ಎಂಐಡಿಸಿಯಲ್ಲಿರುವ ಎಂಎಂಪಿ ಅಲ್ಯೂಮಿನಿಯಂ ಇಂಡಸ್ಟ್ರೀಸ್ನಲ್ಲಿ ಸಂಜೆ ಸುಮಾರು 7 ಗಂಟೆಗೆ ಸ್ಫೋಟ ಸಂಭವಿಸಿತು. ಮೃತಪಟ್ಟ ಎಲ್ಲಾ ಕಾರ್ಮಿಕರು 20ರಿಂದ 25 ವರ್ಷಗಳ ಒಳಗಿನವರು ಹಾಗೂ ನಾಗಪುರದ ನಿವಾಸಿಗಳು. ಇತರ ಐದು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಸ್ಫೋಟದ ಸಂದರ್ಭ ಘಟಕದಲ್ಲಿ 87 ಮಂದಿ ಕೆಲಸ ಮಾಡುತ್ತಿದ್ದರು ಎಂದು ಪೊದ್ದಾರ್ ತಿಳಿಸಿದ್ದಾರೆ.