ಅರೆಸ್ಟ್ ಮೆಮೊ ಜೊತೆಗೆ ಆರೋಪಿಗೆ ಬಂಧನಕ್ಕೆ ಕಾರಣಗಳನ್ನೂ ತಿಳಿಸಬೇಕು: ದಿಲ್ಲಿ ಹೈಕೋರ್ಟ್

Update: 2025-02-08 20:17 IST
HIGH COURT OF DELHI

ದಿಲ್ಲಿ ಹೈಕೋರ್ಟ್ | PTI 

  • whatsapp icon

ಹೊಸದಿಲ್ಲಿ: ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ)ಯ ಕಲಂ 50ರಡಿ ಆರೋಪಿಗೆ ಅರೆಸ್ಟ್ ಮೆಮೊ ಜೊತೆಗೆ ಬಂಧನದ ಕಾರಣಗಳನ್ನೂ ತಿಳಿಸಬೇಕು ಎಂದು ದಿಲ್ಲಿ ಉಚ್ಛ ನ್ಯಾಯಾಲಯವು ಹೇಳಿದೆ.

ನ್ಯಾ.ಅನೂಪ ಜೈರಾಮ್ ಭಂಭಾನಿ ಅವರ ಪ್ರಕಾರ ತನಿಖಾಧಿಕಾರಿಗಳು ಇನ್ನು ಮುಂದೆ ಬಂಧನಕ್ಕೆ ಕಾರಣಗಳನ್ನು ತಿಳಿಸುವುದನ್ನು ಲಘುವಾಗಿ ಪರಿಗಣಿಸುವಂತಿಲ್ಲ.

ಸಿಆರ್‌ಪಿಸಿಯ ಕಲಂ 50ರ ಪ್ರಕಾರ, ವಾರಂಟ್‌ರಹಿತವಾಗಿ ಬಂಧಿಸುವ ಯಾವುದೇ ಪೋಲಿಸ್ ಅಧಿಕಾರಿ ಅಥವಾ ವ್ಯಕ್ತಿಯು ಬಂಧಿತ ವ್ಯಕ್ತಿಗೆ ಅಪರಾಧದ ವಿವರಗಳನ್ನು ಅಥವಾ ಬಂಧನಕ್ಕೆ ಕಾರಣಗಳನ್ನು ತಕ್ಷಣ ತಿಳಿಸಬೇಕು.

ವ್ಯಕ್ತಿಯ ಬಂಧನಕ್ಕೆ ಅಗತ್ಯ ಕಾರಣಗಳು ತನಿಖಾಧಿಕಾರಿಯ ಮನಸ್ಸಿನಲ್ಲಿ ರೂಪುಗೊಂಡ ಬಳಿಕ ಆ ಕಾರಣಗಳನ್ನು ಲಿಖಿತ ರೂಪಕ್ಕಿಳಿಸಿ ಬಂಧನ ಸಮಯದಲ್ಲಿ ಆರೋಪಿಗೆ ತಿಳಿಸದಿರಲು ಯಾವುದೇ ಕಾರಣವಿಲ್ಲ ಎಂದು ಉಚ್ಛ ನ್ಯಾಯಾಲಯವು ಸ್ಪಷ್ಟಪಡಿಸಿತು.

ನ್ಯಾಯಾಲಯದ ಈ ತೀರ್ಪು ಮಹತ್ವದ್ದಾಗಿದೆ,ಏಕೆಂದರೆ ಇದು ವ್ಯಕ್ತಿಗಳ ಬಂಧನಕ್ಕೆ ಕಾರಣಗಳನ್ನು ತಿಳಿಸದೆ ಅವರ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವಂತಿಲ್ಲ ಎನ್ನುವುದನ್ನು ಖಚಿತಪಡಿಸುತ್ತದೆ. ತನಿಖಾಧಿಕಾರಿಯು ಬಂಧನದ ಕಾರಣಗಳನ್ನು ತಿಳಿಸುವುದನ್ನು ಅಗತ್ಯವಾಗಿಸಲು ಅರೆಸ್ಟ್ ಮೆಮೊದಲ್ಲಿ ಕಾಲಮ್‌ವೊಂದನ್ನು ಹೆಚ್ಚುವರಿಯಾಗಿ ಸೇರಿಸುವಂತೆಯೂ ನ್ಯಾಯಾಲಯವು ಸೂಚಿಸಿದೆ.

ಮಹಿಳಾ ಉದ್ಯೋಗಿಗಳ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಯ ಆರೋಪವನ್ನು ಎದುರಿಸುತ್ತಿರುವ ವ್ಯವಸ್ಥಾಪಕನೋರ್ವನ ಬಿಡುಗಡೆಗೆ ಆದೇಶಿಸಿದ ಉಚ್ಛ ನ್ಯಾಯಾಲಯವು ಈ ತೀರ್ಪನ್ನು ಹೊರಡಿಸಿದೆ. ನ್ಯಾಯಾಲಯದ ತೀರ್ಪು ವೈಯಕ್ತಿಕ ಹಕ್ಕುಗಳ ರಕ್ಷಣೆ ಹಾಗೂ ನ್ಯಾಯಸಮ್ಮತ ಮತ್ತು ಪಾರದರ್ಶಕ ಬಂಧನ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳುವ ಮಹತ್ವಕ್ಕೆ ಒತ್ತು ನೀಡಿದೆ

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News