ರಾಜಸ್ಥಾನ: ಗಂಟಲಮಾರಿ ರೋಗಕ್ಕೆ ಆರು ಮಕ್ಕಳು ಬಲಿ

Update: 2024-10-13 04:53 GMT

PC | timesofindia.indiatimes.com

ಜೈಪುರ: ಸಾರ್ವತ್ರಿಕ ಲಸಿಕೆ ಕಾರಣದಂದ ದೇಶದಲ್ಲಿ ನಿರ್ಮೂಲನೆಯಾಗಿದೆ ಎಂದು ನಂಬಲಾಗಿದ್ದ ಡಿಫ್ತೀರಿಯಾ ರೋಗಕ್ಕೆ ರಾಜಸ್ಥಾನದ ಡೀಗ್ ಜಿಲ್ಲೆಯಲ್ಲಿ ಕಳೆದ 30 ದಿನಗಳಲ್ಲಿ ಕನಿಷ್ಠ ಆರು ಮಕ್ಕಳು ಬಲಿಯಾಗಿದ್ದಾರೆ. ಮೃತಪಟ್ಟ ಎಲ್ಲರೂ 10 ವರ್ಷಕ್ಕಿಂತ ಕೆಳ ವಯಸ್ಸಿನ ಮಕ್ಕಳು. ಡಿಫ್ತೀರಿಯಾ ಎನ್ನುವುದು ಬ್ಯಾಕ್ಟೀರಿಯಾ ಸೋಂಕಿನಿಂದ ಉಂಟಾಗುವ ಸಾಂಕ್ರಾಮಿಕ ರೋಗ.

ಜ್ವರ, ಗಂಟಲು ಕೆರೆತ ಮತ್ತು ಆಹಾರ ಸೇವನೆಗೆ ಕಷ್ಟವಾಗುವಂಥ ರೋಗಲಕ್ಷಣಗಳನ್ನು ಹೊಂದಿದ ಈ ರೋಗ ತೀವ್ರವಾದಾಗ ವಾಯುನಾಳಗಳಲ್ಲಿ ತಡೆಯೂ ಉಂಟಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಇದು ಹೇಗೆ ಮರುಕಳಿಸಿದೆ ಎನ್ನುವುದು ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಕಾಡುತ್ತಿದೆ. ಈ ರೋಗ ಸಾಮಾನ್ಯವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಸ್ರಾವ ಮತ್ತು ಶ್ವಾಸನಾಳದ ಸ್ರವಿಸುವಿಕೆಯಿಂದ ಹರಡುತ್ತದೆ.

ಲಸಿಕೆ ಪಡೆದವರಲ್ಲಿ ಇಬ್ಬರು ಮಕ್ಕಳು ಕೂಡಾ ಮೃತಪಟ್ಟವರಲ್ಲಿ ಸೇರಿದ್ದಾರೆ. ಇತರ ಮೂವರು ಮಕ್ಕಳು ಲಸಿಕೆ ಪಡೆದಿಲ್ಲ ಎನ್ನಲಾಗಿದ್ದು, ಮತ್ತೊಂದು ಪ್ರಕರಣದಲ್ಲಿ ಮಗುವಿಗೆ ಲಸಿಕೆ ನೀಡಲಾಗಿತ್ತೇ ಎನ್ನುವುದು ಖಚಿತವಾಗಿ ತಿಳಿದು ಬಂದಿಲ್ಲ. ಜೈಪುರದ ಸರ್ಕಾರಿ ಎಸ್‍ಎಂಎಸ್ ಆಸ್ಪತ್ರೆಯಲ್ಲಿ ಅಕ್ಟೋಬರ್ 9ರಂದು ಮೃತಪಟ್ಟ ಮಗು ಡಿಫ್ತೀರಿಯಾದಿಂದ ಮೃತಪಟ್ಟಿರುವುದನ್ನು ರಾಜ್ಯ ಆರೋಗ್ಯ ಇಲಾಖೆ ದೃಢಪಡಿಸಿದೆ. 10 ಹೆಚ್ಚುವರಿ ಸ್ಯಾಂಪಲ್‍ಗಳನ್ನು ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಡೀಗ್ ಜಿಲ್ಲೆಯಲ್ಲಿ ಸೆಪ್ಟೆಂಬರ್ 14ರಂದು 7 ವರ್ಷದ ಬಾಲಕ ಮೃಪಟ್ಟಿದ್ದ. ಬಳಿಕ ಸೆಪ್ಟೆಂಬರ್ 28ರ ನಡುವೆ ಐದರಿಂದ ಆರು ವರ್ಷ ವಯಸ್ಸಿನ ಮೂವರು ಮಕ್ಕಳು ಹಾಗೂ ಬಳಿಕ 5 ವರ್ಷ ಬಾಲಕನೊಬ್ಬ ಈ ಮಹಾಮಾರಿಗೆ ಬಲಿಯಾಗಿದ್ದ.

Full View

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News