ಕಾಂಗ್ರೆಸ್, ಸಿಪಿಐ(ಎಂ) ಪ್ರತಿಭಟನೆ ಹೊರತಾಗಿಯೂ ‘ದಿ ಕೇರಳ ಸ್ಟೋರಿ’ ಪ್ರಸಾರ ಮಾಡಿದ ದೂರದರ್ಶನ

Update: 2024-04-06 15:28 GMT

Photo: PTI 

ತಿರುವನಂತಪುರ: ಕೇರಳದಲ್ಲಿ ಆಡಳಿತಾರೂಢ ಸಿಪಿಐ(ಎಂ) ಹಾಗೂ ಕಾಂಗ್ರೆಸ್ ನಿಂದ ತೀವ್ರ ಪ್ರತಿಭಟನೆ ವ್ಯಕ್ತವಾದ ಹೊರತಾಗಿಯೂ ದೂರದರ್ಶನ ಶುಕ್ರವಾರ ವಿವಾದಾತ್ಮಕ ಬಾಲಿವುಡ್ ಚಲನಚಿತ್ರ ‘ದಿ ಕೇರಳ ಸ್ಟೋರಿ’ಯನ್ನು ಪ್ರಸಾರ ಮಾಡಿದೆ.

ದೂರದರ್ಶನ ಈ ಚಲನಚಿತ್ರವನ್ನು ರಾತ್ರಿ 8 ಗಂಟೆಗೆ ಪ್ರಸಾರ ಮಾಡಿದೆ.

ಈ ನಡುವೆ ಸಿಪಿಐ(ಎಂ)ನ ಯುವ ಘಟಕ ಡಿವೈಎಫ್ಐ ರಾಜ್ಯಾದ್ಯಂತ ಯುಟ್ಯೂಬರ್ ಧ್ರುವ್ ರಾಠಿಯ ‘‘ದಿ ಕೇರಳ ಸ್ಟೋರಿ ಟ್ರು ಆರ್ ಫೇಕ್’’ ವೀಡಿಯೊವನ್ನು ಪ್ರದರ್ಶಿಸಿದೆ.

ಚಲನಚಿತ್ರ ಪ್ರದರ್ಶನಕ್ಕೆ ಯುವ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಅದು ರಾತ್ರಿ 8.30ಕ್ಕೆ ಇಲ್ಲಿನ ದೂರದರ್ಶನ ಕಚೇರಿಗೆ ಪ್ರತಿಭಟನಾ ರ್ಯಾಲಿ ನಡೆಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News