ದಿಲ್ಲಿ ವಿವಿ ಕಾನೂನು ಪದವಿಯಲ್ಲಿ ಮನುಸ್ಮೃತಿ ಬೋಧಿಸುವ ಪ್ರಸ್ತಾವನೆಗೆ ಶಿಕ್ಷಕರ ಸಂಘ ವಿರೋಧ

Update: 2024-07-12 10:04 GMT

Photo: PTI

ಹೊಸದಿಲ್ಲಿ: ದಿಲ್ಲಿ ಕಾನೂನು ವಿಶ್ವವಿದ್ಯಾನಿಲಯದ ಕಾನೂನು ಪದವಿಯಲ್ಲಿ ಮನುಸ್ಮøತಿಯನ್ನು ಬೋಧಿಸುವ ಪ್ರಸ್ತಾವನೆಯನ್ನು ಶುಕ್ರವಾರ ನಡೆದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಚರ್ಚಿಸಲಾಗಿದ್ದು, ಇದಕ್ಕೆ ಶಿಕ್ಷಕರ ಸಂಘದಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಈ ದೋಷಪೂರಿತ ಕಾನೂನನ್ನು ದಿಲ್ಲಿ ವಿವಿಯ ನಿರ್ಧಾರ ಕೈಗೊಳ್ಳುವ ಮಂಡಳಿಗೆ ಪ್ರಸ್ತಾವನೆಯಾಗಿ ಸಲ್ಲಿಸಲಾಗಿದೆ. ಈ ಸಂಬಂಧ ಪ್ರಸ್ತಾವನೆಯ ಅನ್ವಯ ಮೂರನೇ ವರ್ಷದ ಕಾನೂನು ವಿದ್ಯಾರ್ಥಿಗಳು ಮನುಸ್ಮೃತಿಯನ್ನು ಪಡೆಯಲಿದ್ದಾರೆ.

ಇದು ಒಪ್ಪಿಗೆ ಪಡೆದಲ್ಲಿ ಎಲ್‍ಎಲ್‍ಬಿಯ ಸೆಮಿಸ್ಟರ್ 1 ಮತ್ತು ಆರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪಠ್ಯ ಬದಲಾಗಲಿದೆ.

ಈ ಪರಿಷ್ಕರಣೆಯ ಕರಡಿನ ಅನ್ವಯ ಮನುಸ್ಮೃತಿಯ ಎರಡು ವಿಶ್ಲೇಷಣೆಗಳು ಅಂದರೆ ಜೆ.ಎನ್.ಝಾ ಅವರ ಮೇಧಾತಿಥಿಯ ಮನುಭಾಷ್ಯ ಹಾಗೂ ಕೃಷ್ಣಸ್ವಾಮಿ ಅಯ್ಯರ್ ಅವರ ಮನುಸ್ಮೃತಿ ಸ್ಮೃತಿ ಚಂದ್ರಿಕಾ ಹೊಸ ಪಠ್ಯವಾಗಲಿ ಬರಲಿದೆ.

ಈ ಪರಿಷ್ಕರಣೆಯ ಪ್ರಸ್ತಾವನೆಗೆ ಜೂನ್ 24ರಂದು ನಡೆದ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News