ಪಶ್ಚಿಮ ಬಂಗಾಳದಲ್ಲಿ ಸಚಿವ, ಶಾಸಕರ ಮನೆ ಮೇಲೆ ಈಡಿ ದಾಳಿ

Update: 2024-01-12 15:22 GMT

ಕೋಲ್ಕತಾ: ಅನುಷ್ಠಾನ ನಿರ್ದೇಶನಾಲಯ (ಈಡಿ)ವು ಶುಕ್ರವಾರ ಪಶ್ಚಿಮ ಬಂಗಾಳದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಚಿವ ಸುಜಿತ್ ಬೋಸ್, ತೃಣಮೂಲ ಕಾಂಗ್ರೆಸ್ ಶಾಸಕ ತಪಸ್ ರಾಯ್ ಮತ್ತು ಉತ್ತರ ಡಮ್ ಡಮ್ ಮುನಿಸಿಪಾಲಿಟಿಯ ಸುಬೋಧ್ ಚಕ್ರವರ್ತಿಯ ನಿವಾಸಗಳ ಮೇಲೆ ದಾಳಿ ಮಾಡಿದೆ ಎಂದು ಪಿಟಿಐ ವರದಿ ಮಾಡಿದೆ.

ಪಶ್ಚಿಮ ಬಂಗಾಳದ ಸ್ಥಳೀಯ ಸಂಸ್ಥೆಗಳಿಗೆ ಮಾಡಲಾಗಿರುವ ನೇಮಕಾತಿಗಳಲ್ಲಿ ನಡೆದಿದೆಯೆನ್ನಲಾದ ಅವ್ಯವಹಾರಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ದಾಳಿಗಳನ್ನು ನಡೆಸಲಾಗಿದೆ.

2014 ಮತ್ತು 2018ರ ನಡುವಿನ ಅವಧಿಯಲ್ಲಿ ಪಶ್ಚಿಮ ಬಂಗಾಳದ ವಿವಿಧ ಸ್ಥಳೀಯ ಸಂಸ್ಥೆಗಳು ಸುಮಾರು 1,500 ಮಂದಿಯನ್ನು ಹಣ ಪಡೆದು ಅಕ್ರಮವಾಗಿ ನೇಮಿಸಿವೆ ಎಂಬುದಾಗಿ ಕೇಂದ್ರೀಯ ತನಿಖಾ ಸಂಸ್ಥೆಗಳು ಆರೋಪಿಸಿವೆ. ಈ ವಿಷಯದ ಬಗ್ಗೆ ತನಿಖೆ ಮಾಡುವಂತೆ ಆಗಸ್ಟ್ ನಲ್ಲಿ ಕಲ್ಕತ್ತಾ ಹೈಕೋರ್ಟ್ ಸಿಬಿಐಗೆ ನಿರ್ದೇಶನ ನೀಡಿತ್ತು.

ಶುಕ್ರವಾರ ಬೆಳಗ್ಗೆ, ಕೇಂದ್ರೀಯ ಪಡೆಗಳ ಬೆಂಗಾವಲಿನೊಂದಿಗೆ ಅನುಷ್ಠಾನ ನಿರ್ದೇಶನಾಲಯದ ಅಧಿಕಾರಿಗಳು ಬೋಸ್ರ ಶ್ರೀಭೂಮಿ ಪ್ರದೇಶದಲ್ಲಿರುವ ಎರಡು ನಿವಾಸಗಳ ಮೇಲೆ ದಾಳಿ ನಡೆಸಿದವು. ಒಂದು ತಂಡವು ಬೌಬಝಾರ್ನಲ್ಲಿರುವ ರಾಯ್ರ ಅಪಾರ್ಟ್ಮೆಂಟ್ ಮತ್ತು ಕಚೇರಿಯ ಮೇಲೂ ದಾಳಿ ನಡೆಸಿತು. ಇನ್ನೊಂದು ತಂಡವು ಚಕ್ರವರ್ತಿಯ ನಿವಾಸದಲ್ಲಿ ಶೋಧ ನಡೆಸಿತು.

ಬಾರನಗರ್ ಶಾಸಕ ತಪಸ್ ರಾಯ್ ರಾಜ್ಯ ವಿಧಾನಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ನ ಉಪ ಮುಖ್ಯ ಸಚೇತಕರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News