ಮಣಿಪುರದಲ್ಲಿ ಹೊಸದಾಗಿ ಗುಂಡಿನ ಚಕಮಕಿ
ಇಂಫಾಲ : ಮಣಿಪುರದ ಜಿರಿಬಮ್ ಜಿಲ್ಲೆಯಲ ಮೊಂಗ್‌ಬುಂಗ್ ಮೇತಯ ಗ್ರಾಮದ ಮೇಲೆ ಶಂಕಿತ ಬಂಡುಕೋರರು ಹೊಸದಾಗಿ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಮಂಗಳವಾರ ಸಂಜೆ ಸುಮಾರು 7 ಗಂಟೆ ಹೊತ್ತಿಗೆ ಬಂಡುಕೋರರು ಆಧುನಿಕ ಶಸ್ತ್ರಾಸ್ತ್ರಗಳಿಂದ ಹಲವು ಸುತ್ತು ಗುಂಡುಗಳನ್ನು ಹಾರಿಸಿದರು, ಆಗ ಅಲ್ಲಿದ್ದ ಗ್ರಾಮ ಸ್ವಯಂಸೇವಕರು ಪ್ರತಿದಾಳಿ ನಡೆಸಿದರು ಎಂದು ಪೊಲೀಸರು ಹೇಳಿದರು.
ಆದರೆ, ಗುಂಡಿನ ಚಕಮಕಿಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಅವರು ತಿಳಿಸಿದರು. ಘಟನೆಯ ಸುದ್ದಿ ತಲುಪಿದ ತಕ್ಷಣ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿದವು. ರಾತ್ರಿ 8 ಗಂಟೆಯ ವೇಳೆಗೆ ಗುಂಡಿನ ಹಾರಾಟ ನಿಂತಿತು ಎಂದು ಓರ್ವ ಪೊಲೀಸ್ ಅಧಿಕಾರಿ ತಿಳಿಸಿದರು.
ಅಧಿಕಾರಿಗಳು ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದ್ದಾರೆ. ಕಾರ್ಯಾಚರಣೆ ನಡೆಸುವಾಗ ಭದ್ರತಾ ಪಡೆಗಳಿಗೆ ಸಹಕಾರ ನೀಡುವಂತೆ ಅವರು ಗ್ರಾಮಸ್ಥರಿಗೆ ಮನವಿ ಮಾಡಿದ್ದಾರೆ.
ಕಳೆದ ಎರಡು ದಿನಗಳಲ್ಲಿ, ಹಲವು ಡ್ರೋನ್‌ಗಳು ಮೊಂಗ್‌ಬುಂಗ್ ಮೇತೈ ಗ್ರಾಮದ ಮೇಲೆ ಹಾರುವುದನ್ನು ಗ್ರಾಮಸ್ಥರು ನೋಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.