ಐಎಎಫ್‌ನ ‘ಫ್ಲೈಯಿಂಗ್ ಬುಲೆಟ್ಸ್’ ಸ್ಕ್ವಾಡ್ರನ್‌ನ ಪ್ರಪ್ರಥಮ ಮಹಿಳಾ ಪೈಲಟ್ ಆಗಿ ಮೋಹನಾ ಸಿಂಗ್ ಸೇರ್ಪಡೆ

Update: 2024-09-18 14:05 GMT

ಮೋಹನಾ ಸಿಂಗ್ |  PC : X 

ಹೊಸದಿಲ್ಲಿ : ಭಾರತೀಯ ವಾಯುಪಡೆಯ ಪ್ರತಿಷ್ಠಿತ 18 ‘ಫ್ಲೈಯಿಂಗ್ ಬುಲೆಟ್ಸ್’ ಸ್ಕ್ವಾಡ್ರನ್‌ಗೆ ಸೇರ್ಪಡೆಗೊಂಡ ಪ್ರಪ್ರಥಮ ಮಹಿಳಾ ಪೈಲಟ್ ಆಗಿ ಸ್ಕಾಡ್ರನ್ ಲೀಡರ್ ಮೋಹನಾ ಸಿಂಗ್ ಅವರು ಬುಧವಾರ ಇತಿಹಾಸ ನಿರ್ಮಿಸಿದ್ದಾರೆ.

ಭಾರತದ ಸ್ವದೇಶಿ ನಿರ್ಮಿತ ಎಲ್‌ಸಿಎ ತೇಜಸ್ ಫೈಟರ್ ಜೆಟ್ ಸ್ಕ್ವಾಡ್ರನ್ ಅನ್ನು ಅವರು ನಿರ್ವಹಿಸಲಿದ್ದಾರೆ. ಇತ್ತೀಚೆಗೆ ಜೋಧಪುರದಲ್ಲಿ ನಡೆದ ‘ತರಂಗಶಕ್ತಿ’ ವಾಯುಪಡೆ ಸಮರಾಭ್ಯಾಸದ ಸಂದರ್ಭ ಅವರು ಮೂರು ಸೇನಾ ಪಡೆಗಳ ಉಪವರಿಷ್ಠರೊಂದಿಗೆ ವಿಮಾನಹಾರಾಟದಲ್ಲಿ ಪಾಲ್ಗೊಂ ಡಿದ್ದರು.

ಎಲ್‌ಸಿಎ ತೇಜಸ್ ಫೈಟರ್ ಜೆಟ್‌ನಲ್ಲಿ ಮೋಹನಾ ಸಿಂಗ್ ಅವರು ಭಾರತೀಯ ಭೂಸೇನೆ ಹಾಗೂ ನೌಕಾಪಡೆಗಳ ಉಪವರಿಷ್ಠರಿಗೆ ಮಾಹಿತಿಗಳನ್ನು ನೀಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿತ್ತು.

ಮೋಹನಾಸಿಂಗ್ ಅವರು ಭಾವನಾ ಕಾಂತ್ ಹಾಗೂ ಅವನಿ ಚತುರ್ವೇದಿ ಅವರೊಂದಿಗೆ 2016ರಲ್ಲಿ ದೇಶದ ಚೊಚ್ಚಲ ಮಹಿಳಾ ಫೈಟರ್ ಜೆಟ್ ಪೈಲಟ್‌ಗಳಾಗಿ ಸೇರ್ಪಡೆಗೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಮೋಹನಾ ಸಿಂಗ್ ಅವರು ಮೂಲತಃ ರಾಜಸ್ಥಾನದ ಜ್ಹುನ್‌ಝ್ಹುನು ಜಿಲ್ಲೆಯವರು. ಅವರ ತಾತ ವೈಮಾನಿಕ ಸಂಶೋಧನಾ ಕೇಂದ್ರದಲ್ಲಿ ಫ್ಲೈಟ್ ಗನ್ನರ್ ಆಗಿದ್ದರು. ಅವರ ತಂದೆ ಭಾರತೀಯ ವಾಯುಪಡೆಯಲ್ಲಿ ವಾರಂಟ್ ಅಧಿಕಾರಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News