ಬಿಜೆಪಿ ಮಾಜಿ ಸಂಸದ ಜಯಂತ್ ಸಿನ್ಹಾ ಪುತ್ರ ಕಾಂಗ್ರೆಸ್ ಸೇರ್ಪಡೆ
ಹೊಸದಿಲ್ಲಿ: ಬಿಜೆಪಿಯ ಮಾಜಿ ಸಂಸದ ಜಯಂತ್ ಸಿನ್ಹಾ ಅವರ ಪುತ್ರ ಮತ್ತು ಹಿರಿಯ ನಾಯಕ ಯಶವಂತ್ ಸಿನ್ಹಾ ಅವರ ಮೊಮ್ಮಗ ಆಶೀರ್ ಸಿನ್ಹಾ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಜಾರ್ಖಂಡ್ ಘಟಕ ಮಂಗಳವಾರ ತಿಳಿಸಿದೆ.
ಹಜಾರಿಬಾಗ್‌ನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಜಯಂತ್‌ಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದು, ಇದರ ಬೆನ್ನಲ್ಲೇ ಈ ಬೆಳವಣಿಗೆಗಳು ನಡೆದಿವೆ. ಬಿಜೆಪಿ ಶಾಸಕ ಮನೀಶ್ ಜೈಸ್ವಾಲ್ ಈ ಬಾರಿ ಹಜಾರಿಬಾಗ್‌ನಿಂದ ಕಾಂಗ್ರೆಸ್‌ನ ಜೈ ಪ್ರಕಾಶ್ ಭಾಯಿ ಪಟೇಲ್ ವಿರುದ್ಧ ಸ್ಪರ್ಧಿಸಲಿದ್ದಾರೆ.
1998 ರಿಂದ ಹಜಾರಿಬಾಗ್‌ನಿಂದ ಯಶವಂತ್ ಸಿನ್ಹಾ ಅವರ ಕುಟುಂಬದ ಯಾರಾದರೂ ಚುನಾವಣೆಗೆ ಸ್ಪರ್ಧಿಸುತ್ತಲೇ ಬಂದಿದ್ದು, ಇದೇ ಮೊದಲ ಬಾರಿ ಸಿನ್ಹಾ ಕುಟುಂಬಕ್ಕೆ ಸ್ಪರ್ಧೆಗೆ ಅವಕಾಶ ಸಿಕ್ಕಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಸಿನ್ಹಾ ಕುಟುಂಬದ ಸದಸ್ಯರನ್ನು ಸೆಳೆಯುತ್ತಿದೆ ಎಂದು ವರದಿಯಾಗಿದೆ.
“ಜಯಂತ್ ಸಿನ್ಹಾ ಅವರ ಪುತ್ರ ಆಶೀರ್ ಸಿನ್ಹಾ ಅವರು ಜಾರ್ಖಂಡ್ ಕಾಂಗ್ರೆಸ್‌ನ ಭಾಗವಾಗಲಿದ್ದಾರೆ ಮತ್ತು ಅವರಿಗೆ ಅರ್ಹ ಹುದ್ದೆಗಳನ್ನು ನೀಡಲಾಗುವುದು. ಸದ್ಯಕ್ಕೆ ಅದನ್ನು ಇನ್ನೂ ನಿರ್ಧರಿಸಲಾಗಿಲ್ಲ” ಎಂದು ಕಾಂಗ್ರೆಸ್ ವಕ್ತಾರ ರಾಕೇಶ್ ಸಿನ್ಹಾ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
“ಹಜಾರಿಬಾಗ್‌ನಿಂದ ಯಾರು ಕಾಂಗ್ರೆಸ್‌ಗೆ ಸೇರಿದರೂ ನಮಗೆ ಯಾವುದೇ ಸಮಸ್ಯೆ ಇಲ್ಲ. ನಾವು ಕ್ಷೇತ್ರವನ್ನು ಗೆಲ್ಲುತ್ತೇವೆ” ಎಂದು ಬಿಜೆಪಿ ವಕ್ತಾರ ವಿನಯ್ ಕುಮಾರ್ ಹೇಳಿದ್ದಾರೆ.
BJP MP Jayant Sinha’s son Aashir Sinha joined INC today
— Avishek Goyal (@AG_knocks) May 13, 2024
Isn’t it a super strategy?
Dada in TMC,father in BJP and son in INC now. 4 members of a family going to 4 different parties, so whoever forms Govt, one member would be part of it.
And these guys preach us on Parivarvaad… pic.twitter.com/YpPkxmJdos