ಸಂವಿಧಾನದ ಆಧಾರಸ್ಥಂಭಗಳ ಮೇಲೆ ಸರ್ಕಾರದಿಂದಲೇ ದಾಳಿ: ಮಲ್ಲಿಕಾರ್ಜುನ ಖರ್ಗೆ

Foundational pillars of the Constitution under attack from govt itself: Kharge

Update: 2024-01-26 10:34 GMT

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (PTI)

ಬೆಂಗಳೂರು: “ಚೆನ್ನಾಗಿ-ಯೋಜಿತ ಸಂಚಿನ” ಮೂಲಕ ಭಾರತದ ಸಂವಿಧಾನದ ಆಧಾರಸ್ಥಂಭಗಳು ಸರ್ಕಾರದಿಂದ ದಾಳಿಗೊಳಗಾಗಿವೆ,” ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಹೇಳಿದ್ದಾರಲ್ಲದೆ, ದೇಶದ ಸಂವಿಧಾನ, ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹಾಗೂ ನ್ಯಾಯಕ್ಕಾಗಿ ಹೋರಾಡಲು ಕಾಂಗ್ರೆಸ್‌ ಕಂಕಣಬದ್ಧವಾಗಿದೆ ಎಂದರು.

ಭಾರತದ 75ನೇ ಗಣರಾಜ್ಯೋತ್ಸವ ಅಂಗವಾಗಿ ಖರ್ಗೆ ಅವರು ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿ ಆವರಣದಲ್ಲಿ ರಾಷ್ಟ್ರಧ್ವಜ ಅನಾವರಣಗೊಳಿಸಿ ಮಾತನಾಡುತ್ತಿದ್ದರು.

“2024 ಭಾರತದ ಪಾಲಿಗೆ ಮಹತ್ವದ ವರ್ಷವಾಗಿದೆ. ನಾವು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಬಲ್ಲೆವೇ ಅಥವಾ ಎಲ್ಲಾ ಜನರನ್ನು ಸಮಾನವಾಗಿ ಕಾಣದೇ ಇರುವ ಯುಗಕ್ಕೆ ನಾವು ಹಿಂದೆ ಹೋಗಲಿದೆಯೇ ಎಂದು ಈ ವರ್ಷ ನಿರ್ಧರಿಸಲಿದೆ. ಸಂವಿಧಾನ ಇಷ್ಟೊಂದು ಸವಾಲುಗಳನ್ನು ಎದುರಿಸಬಹುದೆಂದು ನಮ್ಮ ಸಂವಿಧಾನ ರಚನೆಗೆ ಕಾರಣರಾದ ಬಾಬಾ ಸಾಹೇಬ್‌ ಅಂಬೇಡ್ಕರ್‌, ಜವಾಹರಲಾಲ್‌ ನೆಹರು, ಸರ್ದಾರ್‌ ಪಟೇಲ್‌, ರಾಜೇಂದ್ರ ಪ್ರಸಾದ್‌, ಮೌಲಾನಾ ಆಝಾದ್‌ ಸಹಿತ ಸಂವಿಧಾನ ರಚನಾ ಸಭೆಯ ಇತರ ಪ್ರಮುಖರು ಊಹಿಸಿರಲಿಕ್ಕಿಲ್ಲ,” ಎಂದು ಖರ್ಗೆ ಹೇಳಿದರು.

“ಆರೆಸ್ಸೆಸ್‌ ಮತ್ತು ಬಿಜೆಪಿ ಸಂವಿಧಾನವನ್ನು ತಿರುಚಿ ಅದಕ್ಕೆ ಬದಲಾವಣೆಗಳನ್ನು ಮಾಡಲು ಸಂಚು ರೂಪಿಸುತ್ತಿವೆ. ನಮ್ಮ ಸ್ವಾಯತ್ತ ಸಂಸ್ಥೆಗಳನ್ನು ಒಂದೊಂದಾಗಿ ನಾಶಗೊಳಿಸುವ ಅಥವಾ ದುರ್ಬಲಗೊಳಿಸಲು ಸರ್ವ ಯತ್ನಗಳು ನಡೆಯುತ್ತಿವೆ,” ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News