ಸ್ಥಳೀಯ ಸಂಸ್ಥೆಯಿಂದ ಲೈಸೆನ್ಸೂ ಇಲ್ಲ, ಅಗ್ನಿಶಾಮಕದಳದಿಂದ ನಿರಾಕ್ಷೇಪಣಾ ಪತ್ರವೇ ಪಡೆದಿಲ್ಲ!

Update: 2024-05-26 12:27 GMT

TRP ಗೇಮ್ ಝೋನ್ , ರಾಜ್ ಕೋಟ್ | PC : indianexpress

ರಾಜ್ ಕೋಟ್: “TRP ಗೇಮ್ ಝೋನ್ ಮಾಲಕರು ತಮ್ಮ ಮನೋರಂಜನಾ ತಾಣವನ್ನು ಕಾರ್ಯಾಚರಿಸಲು ರಾಜ್ ಕೋಟ್ ಮಹಾನಗರ ಪಾಲಿಕೆಯಿಂದ ಯಾವುದೇ ಪರವಾನಗಿ, ಕಡ್ಡಾಯವಾಗಿ ಪಡೆಯಬೇಕಾದ ಅಗ್ನಿಶಾಮಕ ನಿರಾಕ್ಷೇಪಣಾ ಪತ್ರವನ್ನೂ ಪಡೆದಿರಲಿಲ್ಲ. ಅವರು ತಮ್ಮ ತಾಣವನ್ನು ಅನಧಿಕೃತವಾಗಿ ಕಾರ್ಯಾಚರಿಸುತ್ತಿದ್ದರು. ಈ ಘಟಕದ ಮಾಲಕರು ಕೇವಲ ಮನರಂಜನೆ ಇಲಾಖೆಯಿಂದ ಪರವಾನಗಿ ಪತ್ರ ಪಡೆದಿದ್ದಾರೆ. ಆದರೆ, ಮಹಾನಗರ ಪಾಲಿಕೆಯ ಪರವಾನಗಿಗೆ ಯಾವುದೇ ಅರ್ಜಿಯನ್ನು ಸಲ್ಲಿಸಿಲ್ಲ” ಎಂದು ರಾಜ್ ಕೋಟ್ ನ ಮಹಾನಗರ ಪಾಲಿಕೆಯ ಅಧ್ಯಕ್ಷ ಜೈಮನ್ ಥಾಕರ್ ತಿಳಿಸಿದ್ದಾರೆ.

ಈ ಘಟನೆಯಲ್ಲಿ ಬಹುತೇಕ ಮಕ್ಕಳು ಸೇರಿದಂತೆ 32 ಮಂದಿ ಮೃತಪಟ್ಟಿದ್ದು, TRP ಗೇಮ್ ಝೋನ್ ಮಾಲಕ ಹಾಗೂ ಇಬ್ಬರು ವ್ಯವಸ್ಥಾಪಕರು ಸೇರಿದಂತೆ ಒಟ್ಟು ಹತ್ತು ಮಂದಿಯನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮನರಂಜನಾ ತಾಣವನ್ನು ಕಾರ್ಯಾಚರಿಸುತ್ತಿದ್ದ ಯುವರಾಜ್ ಸಿಂಗ್ ಸೋಳಂಕಿ ಹಾಗೂ ವ್ಯವಸ್ಥಾಪಕರಾದ ನಿತಿನ್ ಜೈನ್, ಯಾಗ್ನೇಶ್ ಪಾಠಕ್ ಹಾಗೂ ಕೆಲವು ಭದ್ರತಾ ಸಿಬ್ಬಂದಿಗಳನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಯ ಕುರಿತು ಶನಿವಾರ ತಡರಾತ್ರಿ ಅಧಿಕೃತ ದೂರು ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

TRP ಗೇಮ್ ಝೋನ್ ಕಳೆದ 18 ತಿಂಗಳಿನಿಂದ ನಗರದ ಹೃದಯ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಈ ಕುರಿತು ಈ ಮನರಂಜನಾ ತಾಣದ ಪ್ರವರ್ತಕರು ವ್ಯಾಪಕ ಪ್ರಚಾರ ನಡೆಸಿದ್ದರು. ಅವರು ಈ ಮನರಂಜನಾ ತಾಣದ ಪ್ರಚಾರಕ್ಕಾಗಿ ಸಾಮಾಜಿಕ ಮಾಧ್ಯಮಗಳ ಇನ್ ಫ್ಲ್ಯೂನ್ಸರ್ ಗಳನ್ನು ಬಳಸಿಕೊಂಡಿದ್ದರು. ತಾಣವು ನಗರದ ಎರಡು ಪ್ರಮುಖ ರಸ್ತೆಗಳಾದ ಕಲವದ್ ರಸ್ತೆ ಹಾಗೂ ನಾನಾ ಮೌವಾ ರಸ್ತೆಗಳು ಕೂಡುವ ಸ್ಥಳದಲ್ಲಿತ್ತು.

ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News