ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿ ಮತ್ತೆ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ

Update: 2024-06-01 16:52 GMT

ಗೌತಮ್ ಅದಾನಿ , ಮುಕೇಶ್ ಅಂಬಾನಿ | PC : PTI 

ಹೊಸದಿಲ್ಲಿ: ಬ್ಲೂಮ್‌ಬರ್ಗ್ ಕೋಟ್ಯಧಿಪತಿಗಳ ಸೂಚ್ಯಂಕದಲ್ಲಿ ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಮತ್ತೆ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಸ್ಥಾನಕ್ಕೇರಿದ್ದಾರೆ. ಬ್ಲೂಮ್‌ಬರ್ಗ್ ಜಾಗತಿಕ ಸೂಚ್ಯಂಕದಲ್ಲೂ ಗೌತಮ್ ಅದಾನಿ 12 ಸ್ಥಾನದಲ್ಲಿದ್ದಾರೆ. ಆ ಮೂಲಕ, ಇದುವರೆಗೆ ಏಶ್ಯದ ಅತ್ಯಂತ ಶ್ರೀಮಂತರಾಗಿದ್ದ ಮುಕೇಶ್ ಅಂಬಾನಿಯನ್ನು ಶ್ರೇಯಾಂಕ ಪಟ್ಟಿಯಲ್ಲಿ ಹಿಂದಿಕ್ಕಿದ್ದಾರೆ. ಇದೇ ಮೊದಲ ಬಾರಿಗೆ ಮುಕೇಶ್ ಅಂಬಾನಿ ಏಶ್ಯದ ಶ್ರೀಮಂತರ ಶ್ರೇಯಾಂಕ ಪಟ್ಟಿಯಲ್ಲಿ 12ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಅದಾನಿ ಸಮೂಹದ ಅಧ್ಯಕ್ಷರಾಗಿರುವ ಗೌತಮ್ ಅದಾನಿ ಅವರ ಸಂಪತ್ತಿನ ಮೌಲ್ಯವು ಶನಿವಾರ ಸಂಜೆ 6 ಗಂಟೆ ವೇಳೆಗೆ 111 ಬಿಲಿಯನ್ ಡಾಲರ್‌ನಷ್ಟಿತ್ತು. ಇದೇ ವೇಳೆ ರಿಲಯನ್ಸ್ ಸಮೂಹದ ಮುಖ್ಯಸ್ಥ ಮುಕೇಶ್ ಅಂಬಾನಿಯ ಸಂಪತ್ತಿನ ಮೌಲ್ಯವು 109 ಬಿಲಿಯನ್ ಡಾಲರ್‌ನಷ್ಟಿತ್ತು. ಅದಾನಿ ಸಮೂಹದ ಷೇರು ಮೌಲ್ಯವು ಮತ್ತೆ ಹೆಚ್ಚಳಗೊಂಡಿರುವುದರಿಂದ ಗೌತಮ್ ಅದಾನಿ ಅವರು ಮುಕೇಶ್ ಅಂಬಾನಿಯನ್ನು ಮತ್ತೆ ಹಿಂದಿಕ್ಕಿದ್ದಾರೆ ಎಂದು ಹೇಳಲಾಗಿದೆ.

ಮುಂದಿನ ದಶಕದೊಳಗೆ 90 ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆ ಮಾಡುವ ಮೂಲಕ ಅದಾನಿ ಸಮೂಹವು ವಿಸ್ತರಣೆಯ ಉದ್ದೇಶ ಹೊಂದಿದೆ ಎಂದು ಜೆಫೆರೀಸ್ ಹೇಳಿದ ನಂತರ ಅದಾನಿ ಸಮೂಹದ ಎಲ್ಲ ಸಂಸ್ಥೆಗಳ ಷೇರು ಮೌಲ್ಯ ಏರಿಕೆ ಕಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News