ಗುಜರಾತ್ | ಕಾಂಗ್ರೆಸ್ ನಾಯಕ ನಾರಣ್ ರಾಠವಾ ಬಿಜೆಪಿಗೆ ಸೇರ್ಪಡೆ

Update: 2024-02-27 17:42 GMT

ನಾರಣ್ ರಾಠವಾ | Photo: X/@CRPaatil

ಗಾಂಧಿನಗರ: ಕಾಂಗ್ರೆಸ್ ನ ರಾಜ್ಯ ಸಭಾ ಸದಸ್ಯ ಹಾಗೂ ಕೇಂದ್ರದ ಮಾಜಿ ಸಚಿವ ನಾರಣ್ ರಾಠವಾ ಅವರು ತನ್ನ ಪುತ್ರ ಹಾಗೂ ದೊಡ್ಡ ಸಂಖ್ಯೆಯ ಬೆಂಬಲಿಗರೊಂದಿಗೆ ಇಲ್ಲಿ ಮಂಗಳವಾರ ಇಲ್ಲಿ ಬಿಜೆಪಿಗೆ ಸೇರಿದ್ದಾರೆ.

ಗುಜರಾತಿನ ಛೋಟಾ ಉದೇಪುರದ ಬುಡಕಟ್ಟು ನಾಯಕರಾಗಿರುವ ರಾಠವಾ ಅವರು ರಾಜ್ಯ ಸಭಾ ಸದಸ್ಯತ್ವದ ಅಧಿಕಾರಾವಧಿ ಈ ವರ್ಷ ಎಪ್ರಿಲ್ ನಲ್ಲಿ ಅಂತ್ಯಗೊಳ್ಳಲಿದೆ.

ಅವರು ಲೋಕಸಭೆ ಚುನಾವಣೆಯಲ್ಲಿ 5 ಬಾರಿ ಜಯ ಗಳಿಸಿದ್ದಾರೆ. ಮೊದಲು 1989ರಲ್ಲಿ, ಅನಂತರ 1991, 1996, 1998 ಹಾಗೂ 2004ರಲ್ಲಿ ಜಯ ಗಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News