ಕೇಜ್ರಿವಾಲ್ ಮರುಪರಿಶೀಲನೆ ಅರ್ಜಿ ತಿರಸ್ಕರಿಸಿದ ಗುಜರಾತ್ ಹೈಕೋರ್ಟ್
Update: 2023-11-09 15:42 GMT
ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿಯವರ ಎಂ.ಎ. ಪದವಿಯ ಕುರಿತು ಮಾಹಿತಿಯನ್ನು ಒದಗಿಸುವಂತೆ ಗುಜರಾತ್ ವಿವಿಗೆ ಕೇಂದ್ರ ಮಾಹಿತಿ ಆಯೋಗ (ಸಿಐಸಿ)ದ ನಿರ್ದೇಶನವನ್ನು ತಳ್ಳಿ ಹಾಕಿರುವ ಆದೇಶದ ಮರುಪರಿಶೀಲನೆಯನ್ನು ಕೋರಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಉಚ್ಚ ನ್ಯಾಯಾಲಯವು ಗುರುವಾರ ತಿರಸ್ಕರಿಸಿದೆ.
ಸಿಐಸಿ ನಿರ್ದೇಶನದ ವಿರುದ್ಧ ಗುಜರಾತ್ ವಿವಿಯು ಸಲ್ಲಿಸಿದ್ದ ಮೇಲ್ಮನವಿಯನ್ನು ಕಳೆದ ಮಾರ್ಚ್‌ನಲ್ಲಿ ವಿಚಾರಣೆಗೆ ಅಂಗೀಕರಿಸಿದ್ದ ಗುಜರಾತ್ ಉಚ್ಚ ನ್ಯಾಯಾಲಯವು, ನಿರ್ದೇಶನವನ್ನು ತಳ್ಳಿ ಹಾಕಿದ್ದಲ್ಲದೆ ಕೇಜ್ರಿವಾಲ್‌ಗೆ 25,000 ರೂ.ಗಳ ದಂಡವನ್ನೂ ವಿಧಿಸಿತ್ತು.
ಮೋದಿಯವರ ಪದವಿ ಕುರಿತು ಮಾಹಿತಿ ಆನ್‌ಲೈನ್‌ನಲ್ಲಿ ಲಭ್ಯವಿದೆ ಎಂಬ ಗುಜರಾತ್ ವಿವಿಯ ಹೇಳಿಕೆಗೆ ವ್ಯತಿರಿಕ್ತವಾಗಿ ವಿವಿಯ ವೆಬ್‌ಸೈಟ್‌ನಲ್ಲಿ ಯಾವುದೇ ಮಾಹಿತಿ ಲಭ್ಯವಿಲ್ಲ ಎನ್ನುವುದು ಕೇಜ್ರಿವಾಲ್ ಅವರ ಪ್ರಮುಖ ವಾದಗಳಲ್ಲಿ ಒಂದಾಗಿತ್ತು.