ಹರ್ಯಾಣ: ಬಿಜೆಪಿಯೊಂದಿಗೆ ಮುರಿದು ಬಿದ್ದ ಮೈತ್ರಿ |10 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದ ಜೆಜೆಪಿ
ಚಂಡಿಗಢ : ಹರ್ಯಾಣದ 10 ಲೋಕಸಭಾ ಕ್ಷೇತ್ರಗಳಲ್ಲಿ ಜನನಾಯಕ ಜನತಾ ಪಾರ್ಟಿ (ಜೆಜೆಪಿ) ಸ್ಪರ್ಧಿಸಲಿದೆ ಎಂದು ಅಜಯ್ ಚೌಟಾಲ ನೇತೃತ್ವದ ಜೆಜೆಪಿ ಮಂಗಳವಾರ ಘೋಷಿಸಿದೆ.
ಬಿಜೆಪಿಯೊಂದಿಗಿನ ಮೈತ್ರಿ ಮುರಿದು ಬಿದ್ದ ಕೆಲವೇ ದಿನಗಳ ಬಳಿಕ ಜೆಜೆಪಿ ಈ ಘೋಷಣೆ ಮಾಡಿದೆ.
ದಿಲ್ಲಿಯಲ್ಲಿ ಜೆಜೆಪಿಯ ರಾಜಕೀಯ ವ್ಯವಹಾರಗಳ ಸಮಿತಿ (ಪಿಎಸಿ) ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಕ್ಷದ ಹೇಳಿಕೆ ತಿಳಿಸಿದೆ. ದಿಲ್ಲಿಯಲ್ಲಿ ಆಯೋಜಿಸಿದ್ದ ಪಿಎಸಿ ಸಭೆಯಲ್ಲಿ ಲೋಕಸಭೆ ಚುನಾವಣೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚಿಸಲಾಗಿದೆ ಎಂದು ಅದು ತಿಳಿಸಿದೆ.
ಜೆಜೆಪಿಯ ರಾಷ್ಟ್ರಾಧ್ಯಕ್ಷ ಅಜಯ್ ಸಿಂಗ್ ಚೌಟಾಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹರ್ಯಾಣದ ಪ್ರತಿ ಲೋಕಸಭಾ ಕ್ಷೇತ್ರದ ಕೆಲವು ಹೆಸರುಗಳನ್ನು ಅಂತಿಮಗೊಳಿಸಲಾಯಿತು. ಹರ್ಯಾಣವಲ್ಲದೆ, ಚಂಡಿಗಡದಲ್ಲಿ ಕೂಡ ಪಕ್ಷ ಸ್ಪರ್ಧಿಸುವ ಸಾಧ್ಯತೆ ಕುರಿತು ಪರಿಶೀಲನೆ ನಡೆಸುವಂತೆ ಸಭೆಯಲ್ಲಿ ಪಾಲ್ಗೊಂಡ ಕೆಲವು ಸದಸ್ಯರು ಸಲಹೆ ನೀಡಿದರು ಎಂದು ಹೇಳಿಕೆ ತಿಳಿಸಿದೆ
ಪಿಎಸಿ ಹರ್ಯಾಣದ ಎಲ್ಲಾ 10 ಲೋಕಸಭಾ ಸ್ಥಾನಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಹೆಸರನ್ನು ಚರ್ಚಿಸಿತು ಮತ್ತು ವಿವಿಧ ಮಾನದಂಡಗಳ ಮೂಲಕ ಮೌಲ್ಯಮಾಪನ ಮಾಡಿತು ಎಂದು ಅವರು ಹೇಳಿದರು.