ಮುಂಬೈಯಲ್ಲಿ ಭಾರೀ ಮಳೆ: ಮನೆಯಿಂದ ಹೊರ ಬರಬೇಡಿ ಎಂದು ಜನರಿಗೆ ಸರಕಾರ ಸಲಹೆ

Update: 2024-07-08 11:02 GMT
PC : PTI 

ಮುಂಬೈ: ಸೋಮವಾರ ಬೆಳಗ್ಗೆ ಸುರಿದ ಭಾರಿ ಮಳೆಯಿಂದಾಗಿ ಮುಂಬೈ ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಂಬೈನ ಪ್ತಮುಖ ರಸ್ತೆಗಳೆಲ್ಲ ಜಲಾವೃತಗೊಂಡಿರುವುದರಿಂದ ವಾಹನ ಸಂಚಾರಕ್ಕೆ ಭಾರಿ ಅಡಚಣೆಯುಂಟಾಗಿದೆ. ಮಳೆ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿರುವುದರಿಂದ ಮುಂಬೈ ನಗರ ನಿವಾಸಿಗಳ ದಿನಚರಿ ಸಂಪೂರ್ಣವಾಗಿ ವ್ಯತ್ಯಯಗೊಂಡಿದೆ. ಅಲ್ಲದೇ ಮನೆಯಿಂದ ಯಾರೂ ಹೊರ ಬರಬೇಡಿ ಎಂದು ಮಹಾರಾಷ್ಟ್ರ ಸರಕಾರ ಸಲಹೆ ನೀಡಿದೆ.

ಬೆಳಗ್ಗೆಯಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮುಂಬೈನ ಕೆಲವು ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ. ಮುಂಬೈ ವಿಮಾನ ನಿಲ್ದಾಣದಿಂದ 27 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಇಂದು ಮುಂಜಾನೆ 1 ಗಂಟೆಯಿಂದ ಬೆಳಗ್ಗೆ ಏಳು ಗಂಟೆಯವರೆಗೆ ಸುರಿದ ಭಾರಿ ಮಳೆಯಿಂದಾಗಿ ನಗರದ ವಿವಿಧ ಪ್ರದೇಶಗಳಲ್ಲಿ 300 ಮಿಲಿಮೀಟರ್‌ಗೂ ಹೆಚ್ಚು ಮಳೆ ದಾಖಲಾಗಿದೆ ಎಂದು ಸ್ಥಳೀಯ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.

ಅಂಧೇರಿ, ಕುರ್ಲಾ, ಭಾಂಡುಪ್, ಕಿಂಗ್ಸ್ ಸರ್ಕಲ್, ವಿಲೆ ಪಾರ್ಲೆ ಹಾಗೂ ದಾದರ್‌ನಂಥ ಕೆಲವು ಪ್ರದೇಶಗಳಲ್ಲಿ ಗಮನಾರ್ಹ ಪ್ರಮಾಣದ ನೀರು ನಿಂತಿದೆ ಎಂದು ವರದಿಯಾಗಿದೆ.

ಈ ನಡುವೆ, ಬಾಂಬೆ ಮಹಾನಗರ ಪಾಲಿಕೆಯು ತನ್ನ ವ್ಯಾಪ್ತಿಯ ಸರಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಅರ್ಧ ದಿನದ ರಜೆ ಘೋಷಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News