ಹಿಮಾಚಲ ಪ್ರದೇಶ: ಅನರ್ಹಗೊಂಡ 6 ಮಂದಿ ಕಾಂಗ್ರೆಸ್‌ ಶಾಸಕರು ಬಿಜೆಪಿ ಸೇರ್ಪಡೆ

Update: 2024-03-23 08:09 GMT

Screengrab: youtube/BJP

ಹೊಸದಿಲ್ಲಿ: ಹಿಮಾಚಲ ಪ್ರದೇಶದಲ್ಲಿನ ರಾಜಕೀಯ ಅನಿಶ್ಚಿತತೆ ಮುಂದುವರಿದಿದ್ದು, ಹಿಮಾಚಲ ಪ್ರದೇಶ ವಿಧಾನಸಭೆಯ ಹಲವಾರು ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿ, ಮುಂದಿನ ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಶನಿವಾರ ಮೂಲಗಳು ತಿಳಿಸಿವೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಆರು ಬಂಡಾಯ ಕಾಂಗ್ರೆಸ್ ಶಾಸಕರಾದ ಸುಧೀರ್ ಶರ್ಮ, ರವಿ ಠಾಕೂರ್, ರಾಜಿಂದರ್ ರಾಣಾ, ಇಂದರ್ ದತ್ ಲಖನ್ ಪಾಲ್, ಚೇತನ್ಯ ಶರ್ಮ ಹಾಗೂ ದೇವಿಂದರ್ ಕುಮಾರ್ ಭುಟ್ಟೊ ಅವರನ್ನು ಫೆಬ್ರವರಿ 29ರಂದು ಅನರ್ಹಗೊಳಿಸಲಾಗಿತ್ತು. ಸದನದಲ್ಲಿ ಹಾಜರಿರಬೇಕು ಹಾಗೂ ಹಿಮಾಚಲ ಪ್ರದೇಶ ಸರಕಾರದ ವಿಶ್ವಾಸ ಮತ ಹಾಗೂ ಬಜೆಟ್ ಪರ ಮತ ಚಲಾಯಿಸಬೇಕು ಎಂಬ ಪಕ್ಷದ ವಿಪ್ ಅನ್ನು ಧಿಕ್ಕರಿಸಿದ್ದರಿಂದ ವಿಧಾನಸಭಾ ಸ್ಪೀಕರ್ ಇವರನ್ನೆಲ್ಲ ಅನರ್ಹಗೊಳಿಸಿದ್ದರು. ಆದರೆ, ಇಂದು (ಮಾರ್ಚ್ 23)ರಂದು ಇವರೆಲ್ಲ ಬಿಜೆಪಿಯನ್ನು ಸೇರ್ಪಡೆಯಾಗಿದ್ದಾರೆ ಎಂದು ವರದಿಯಾಗಿದೆ.

ಈ ಎಲ್ಲರ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಆಯೋಗವು ಉಪ ಚುನಾವಣೆಯನ್ನು ಘೋಷಿಸಿದೆ.

ಮೂವರು ಸ್ವತಂತ್ರ ಶಾಸಕರಾದ ಆಶಿಶ್ ಶರ್ಮ, ಹೋಶಿಯಾರ್ ಸಿಂಗ್ ಹಾಗೂ ಕೆ.ಎಲ್.ಠಾಕೂರ್ ಕೂಡಾ ಶುಕ್ರವಾರ ತಮ್ಮ ರಾಜಿನಾಮೆ ಪತ್ರಗಳನ್ನು ಸಲ್ಲಿಸಿದ್ದಾರೆ. ಇವರ ಕ್ಷೇತ್ರಗಳಿಗೂ ಉಪ ಚುನಾವಣಾ ನಡೆಯುವ ನಿರೀಕ್ಷೆಯಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News