ಉತ್ತರ ಪ್ರದೇಶ: ಮಕ್ಕಳ ಕಳ್ಳರು, ಮುಸ್ಲಿಮರು ಎಂದು ಶಂಕಿಸಿ ಸಾಧುಗಳಿಗೆ ಹಲ್ಲೆ!

Update: 2024-07-14 17:18 IST
ಉತ್ತರ ಪ್ರದೇಶ: ಮಕ್ಕಳ ಕಳ್ಳರು, ಮುಸ್ಲಿಮರು ಎಂದು ಶಂಕಿಸಿ ಸಾಧುಗಳಿಗೆ ಹಲ್ಲೆ!

Photo: X/ @zoo_bear

  • whatsapp icon

ಮೀರತ್ (ಉತ್ತರ ಪ್ರದೇಶ): ಮಕ್ಕಳ ಕಳ್ಳರು ಹಾಗೂ ಮುಸ್ಲಿಮರು ಎಂದು ಶಂಕಿಸಿರುವ ಗುಂಪೊಂದು ಹಿಂದೂ ಸಾಧುಗಳನ್ನು ಅಮಾನುಷವಾಗಿ ಥಳಿಸಿದ್ದಾರೆನ್ನಲಾದ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ.

ಹಲ್ಲೆಗೀಡಾಗಿರುವ ಎಲ್ಲರೂ ಹರ್ಯಾಣದ ಯಮುನಾನಗರ ನಿವಾಸಿಗಳಾಗಿದ್ದು, ಅವರನ್ನು ಗೌರವ್, ಗೋಪಿ ಹಾಗೂ ಸುನೀಲ್ ಎಂದು ಗುರುತಿಸಲಾಗಿದೆ. ನಾಥ ಪರಂಪರೆಯ ಸಾಧುಗಳಾದ ಸಂತ್ರಸ್ತರನ್ನು ಮುಸ್ಲಿಮರು ಹಾಗೂ ಮಕ್ಕಳ ಕಳ್ಳರು ಎಂದು ತಪ್ಪಾಗಿ ತಿಳಿದು, ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು Alt News ನ ಸಹ-ಸಂಸ್ಥಾಪಕ ಮುಹಮ್ಮದ್ ಝುಬೇರ್ ಆರೋಪಿಸಿದ್ದಾರೆ.

ಸಂತ್ರಸ್ತರು ಮುಸ್ಲಿಮರಾಗಿದ್ದರೂ, ಹಿಂದೂ ಸಾಧುಗಳಂತೆ ವೇಷ ಹಾಕಿಕೊಂಡಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಅನುಮಾನಗೊಂಡಿದ್ದರಿಂದ ಈ ಘಟನೆ ನಡೆದಿದೆ. ಘಟನೆಯ ನಂತರ ಸಂತ್ರಸ್ತರನ್ನು ಠಾಣೆಗೆ ಕರೆದೊಯ್ದ ಪೊಲೀಸರು, ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ಈ ಆರೋಪ ನಿರಾಧಾರ ಎಂಬುದು ಬೆಳಕಿಗೆ ಬಂದಿದೆ. ಸಾಧುಗಳು ಹಿಂದೂಗಳೇ ಆಗಿದ್ದು, ಅವರು ನಾಥ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅವರು ಭಿಕ್ಷಾಟನೆಯಲ್ಲಿ ತೊಡಗಿದ್ದರು ಎಂದು ಪೊಲೀಸರು ದೃಢಪಡಿಸಿದ್ದಾರೆ.

ಪೊಲೀಸರು ಸಂತ್ರಸ್ತ ಸಾಧುಗಳನ್ನು ಬಿಡುಗಡೆಗೊಳಿಸಿದ ನಂತರವೂ, ಅವರ ಮೇಲೆ ಅಮಾನುಷ ಹಲ್ಲೆ ನಡೆಸಿದ ಆರೋಪಿಗಳು ಇನ್ನೂ ತಲೆ ಮರೆಸಿಕೊಂಡಿದ್ದಾರೆ. ಸಾಧುಗಳ ಧಾರ್ಮಿಕ ಗುರುತು ವಿಚಾರಿಸಿ, ಹನುಮಾನ್ ಚಾಲೀಸ್ ಪಠಿಸುವಂತೆ ಅವರಿಗೆ ಸೂಚಿಸಿದ ನಂತರ, ಅವರನ್ನು ದೊಣ್ಣೆಗಳಿಂದ ಅಮಾನುಷವಾಗಿ ಥಳಿಸಿರುವುದು ವೈರಲ್ ವಿಡಿಯೊದಲ್ಲಿ ಕಂಡು ಬಂದಿದೆ.

ಸಾಧುಗಳನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡ ಆಥವಾ ಹಲ್ಲೆ ನಡೆದ ಸ್ಥಳದ ಕುರಿತು ನಿರಾಕರಿಸುತ್ತಿರುವ ಪೊಲೀಸರು, ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲವೆಂಬುದರತ್ತ ಮುಹಮ್ಮದ್ ಝುಬೇರ್ ಬೊಟ್ಟು ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News