ಪ್ರಶಸ್ತಿ ಮರಳಿಸಿದ ವಿನೇಶ್ ಫೋಗಟ್‌; ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

Update: 2023-12-31 10:48 GMT

Photo credit: PTI

ಹೊಸದಿಲ್ಲಿ: ಖೇಲ್‌ರತ್ನ ಮತ್ತು ಅರ್ಜುನ ಪ್ರಶಸ್ತಿಗಳನ್ನು ಮರಳಿಸುವ ಎರಡು ಬಾರಿಯ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ಕುಸ್ತಿಪಟು ವಿನೇಶ್ ಫೋಗಟ್ ಅವರ ನಿರ್ಧಾರದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ರವಿವಾರ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ಹೊತ್ತಿರುವ ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್‌ಐ)ದ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್‌ರ ಆಪ್ತ ಸಂಜಯ ಸಿಂಗ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದನ್ನು ಪ್ರತಿಭಟಿಸಿ ವಿನೇಶ ಶನಿವಾರ ತನ್ನ ಪ್ರಶಸ್ತಿಗಳನ್ನು ಮರಳಿಸಲು ಪ್ರಧಾನಿ ನಿವಾಸಕ್ಕೆ ಹೋಗುತ್ತಿದ್ದಾಗ ಪೋಲಿಸರು ಅವರನ್ನು ತಡೆದಿದ್ದರು. ವಿನೇಶ ಪ್ರಶಸ್ತಿಗಳನ್ನು ಕರ್ತವ್ಯಪಥದ ಕಾಲುದಾರಿಯಲ್ಲಿ ತೊರೆದು ತೆರಳಿದ್ದರು.

ದೇಶದ ಪ್ರತಿಯೊಬ್ಬ ಹೆಣ್ಣುಮಗಳಿಗೂ ಸ್ವಾಭಿಮಾನ ಅತ್ಯಂತ ಮುಖ್ಯವಾಗಿದೆ ಮತ್ತು ಇತರ ಯಾವುದೇ ಪದಕ ಅಥವಾ ಗೌರವ ನಂತರದ ಸ್ಥಾನದಲ್ಲಿರುತ್ತದೆ ಎಂದು ರಾಹುಲ್ ರವಿವಾರ ಟ್ವೀಟಿಸಿದ್ದಾರೆ.

ಇಂದು "ಘೋಷಿತ ಬಾಹುಬಲಿ"ಯು ಪಡೆದಿರುವ ರಾಜಕೀಯ ಲಾಭವು ಈ ಧೀರ ಹೆಣ್ಣುಮಕ್ಕಳ ಕಣ್ಣೀರಿಗಿಂತ ದೊಡ್ಡದೇ? ಪ್ರಧಾನಿ ದೇಶದ ಪಾಲಕರಾಗಿದ್ದಾರೆ. ಅವರಿಂದ ಇಂತಹ ಸಂವೇದನಾಹೀನತೆಯನ್ನು ನೋಡುವುದು ನೋವನ್ನುಂಟು ಮಾಡುತ್ತಿದೆ ಎಂದು ರಾಹುಲ್ ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News