ಹೈದರಾಬಾದ್: ಹಳಿ ತಪ್ಪಿದ ಚಾರ್ ಮಿನಾರ್ ಎಕ್ಸ್ ಪ್ರೆಸ್‌ ರೈಲು; ಐವರಿಗೆ ಗಾಯ

Update: 2024-01-10 05:18 GMT

Photo: ANI

ಹೈದರಾಬಾದ್:  ಚಾರ್ ಮಿನಾರ್ ಎಕ್ಸ್ ಪ್ರೆಸ್‌ ರೈಲಿನ ಮೂರು ಬೋಗಿಗಳು ಹಳಿತಪ್ಪಿ ಐವರು ಗಾಯಗೊಂಡಿರುವ ಘಟನೆ ನಾಂಪಲ್ಲಿ ರೈಲು ನಿಲ್ದಾಣದಲ್ಲಿ ನಡೆದಿದೆ ಎಂದು ANI ಸುದಿ ಸಂಸ್ಥೆ ವರದಿ ಮಾಡಿದೆ.

ಬುಧವಾರ ಬೆಳಗ್ಗೆ 9:15ರ ಸುಮಾರಿಗೆ  ಚೆನ್ನೈನಿಂದ ಬರುತ್ತಿದ್ದ ರೈಲು ನಿಲ್ದಾಣದ  ಟರ್ಮಿನಲ್ ತಲುಪುತ್ತಿದ್ದಂತೆ, ನಿಲ್ಲಿಸಲು ಕ್ಷಣ ಮಾತ್ರ ಬಾಕಿಯಿರುವಾಗ ಈ ಘಟನೆ ನಡೆದಿದೆ.

ಘಟನೆಯಲ್ಲಿ ರೈಲಿನ 3 ಬೋಗಿಗಳು ಹಳಿತಪ್ಪಿವೆ. ರೈಲಿನ ಬಾಗಿಲ ಬಳಿ ಇಳಿಯಲು ನಿಂತಿದ್ದ ಸುಮಾರು 5 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರಿಗೆ ರೈಲ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ದಕ್ಷಿಣ ಮಧ್ಯ ರೈಲ್ವೆಯ ಮುಖ್ಯ ಸಾವರ್ಜನಿಕ ಸಂಪರ್ಕಾಧಿಕಾರಿ ರಾಕೇಶ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News