"ನಾನು ನಿಮ್ಮ ಕೈಗೊಂಬೆಯಲ್ಲ": ಅಜಿತ್ ಪವಾರ್ ವಿರುದ್ಧ ವಾಗ್ದಾಳಿ ನಡೆಸಿದ ಎನ್ಸಿಪಿ ಹಿರಿಯ ನಾಯಕ ಛಗನ್ ಭುಜಬಲ್

Update: 2024-12-17 23:33 IST
"ನಾನು ನಿಮ್ಮ ಕೈಗೊಂಬೆಯಲ್ಲ": ಅಜಿತ್ ಪವಾರ್ ವಿರುದ್ಧ ವಾಗ್ದಾಳಿ ನಡೆಸಿದ ಎನ್ಸಿಪಿ ಹಿರಿಯ ನಾಯಕ ಛಗನ್ ಭುಜಬಲ್

ಅಜಿತ್ ಪವಾರ್ , ಛಗನ್ ಭುಜಬಲ್ PC : businesstoday

  • whatsapp icon

ಮುಂಬೈ: ಈ ಬಾರಿಯ ಮಹಾಯುತಿ ಸರಕಾರದಲ್ಲಿ ತನಗೆ ಸಚಿವ ಸ್ಥಾನ ನಿರಾಕರಿಸಿರುವುದರಿಂದ, ಉಪ ಮುಖ್ಯಮಂತ್ರಿ ಅಜಿತ್ ಪವಾರ್ ವಿರುದ್ಧ ಸಿಡಿದೆದ್ದಿರುವ ಇತರೆ ಹಿಂದುಳಿದ ವರ್ಗಗಳ ನಾಯಕ ಛಗನ್ ಭುಜಬಲ್, ನಾನು ಯಾರ ಕೈಗೊಂಬೆಯೂ ಅಲ್ಲ ಎಂದು ಮಂಗಳವಾರ ಕಿಡಿ ಕಾರಿದ್ದಾರೆ.

ನಾನು ಸಚಿವನಾಗಬೇಕು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಬಯಸಿದ್ದರು ಹೊಂದಿದ್ದರು ಎಂದೂ ಅವರು ಹೇಳಿದ್ದಾರೆ.

ವಿಧಾನಸಭಾ ಅಧಿವೇಶನ ನಡೆಯುತ್ತಿರುವ ಚಳಿಗಾಲದ ರಾಜಧಾನಿಯಾದ ನಾಗಪುರವನ್ನು ತೊರೆದು, ಇದೀಗ ಭುಜಬಲ್ ತಮ್ಮ ಸ್ವಕ್ಷೇತ್ರ ನಾಶಿಕ್ ಗೆ ಮರಳಿದ್ದಾರೆ. ಆದರೆ, ತಮ್ಮ ವಾಗ್ದಾಳಿಯ ಸಂದರ್ಭದಲ್ಲಿ ಅಜಿತ್ ಪವಾರ್ ರನ್ನು 77 ವರ್ಷದ ಭುಜಬಲ್ ಹೆಸರಿಸಿಲ್ಲ.

ಛಗನ್ ಭುಜಬಲ್ ಅವರಿಗೆ ಎನ್ಸಿಪಿ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಗುಂಪೊಂದು ಬೆಂಬಲ ವ್ಯಕ್ತಪಡಿಸಿದ್ದರೂ, ಅವರು ಈ ಕುರಿತು ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡಿಲ್ಲ.

ನಿಮ್ಮ ಮುಂದಿನ ಕ್ರಮವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಛಗನ್ ಭುಜಬಲ್, “ಎಲ್ಲಿ ಅಗತ್ಯವಿಲ್ಲವೊ, ಅಲ್ಲಿರಬಾರದು” ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.

ಎನ್ಸಿಪಿಯ ಹಿರಿಯ ನಾಯಕರಾದ ಛಗನ್ ಭುಜಬಲ್, ಈ ಹಿಂದಿನ ಪ್ರಜಾಸತ್ತಾತ್ಮಕ ರಂಗ, ಮಹಾವಿಕಾಸ್ ಅಘಾಡಿ ಹಾಗೂ ಮಹಾಯುತಿ ಸರಕಾರಗಳಲ್ಲಿ ಉಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News