ನಾನು ರಾಜಕೀಯದಲ್ಲಿರಲೆಂದೇ ಇಲ್ಲಿಗೆ ಬಂದಿದ್ದೇನೆ: ಯೂಸುಫ್ ಪಠಾಣ್

Update: 2024-04-21 12:39 GMT

ಯೂಸುಫ್ ಪಠಾಣ್ | PC : ANI 

ಕೋಲ್ಕತ್ತಾ: ಈಗಾಗಲೇ ಜನರು ನನ್ನನ್ನು ವಿಜಯಿ ಎಂದು ಒಪ್ಪಿಕೊಂಡಿದ್ದು, ನಾನು ರಾಜಕೀಯದಲ್ಲಿ ಉಳಿಯಲು ಹಾಗೂ ಈ ನಗರದ ಜನರೊಂದಿಗೆ ಸಂಪರ್ಕದಲ್ಲಿರಲು ಇಲ್ಲಿಗೆ ಬಂದಿದ್ದೇನೆ ಎಂದು ಬಹರಂಪುರ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಪ್ರಬಲ ಅಭ್ಯರ್ಥಿ ಅಧೀರ್ ರಂಜನ್ ಚೌಧುರಿ ವಿರುದ್ಧ ಟಿಎಂಸಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ಯೂಸುಫ್ ಪಠಾಣ್ ಹೇಳಿದ್ದಾರೆ.

ಬಹರಂಪುರ್ ನಲ್ಲಿ ಸಾಗುತ್ತಿರುವಷ್ಟೂ ದಿನ ನಾನು ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಪಡೆಯುತ್ತಿದ್ದೇನೆ ಎಂದು ಪಠಾಣ್ ಹೇಳಿದ್ದಾರೆ.

ಈ ಕುರಿತು PTI ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಬಲಗೈ ಬ್ಯಾಟರ್ ಯೂಸುಫ್ ಪಠಾಣ್, “ನಾವು ನಿಮ್ಮನ್ನು ಇಲ್ಲಿಂದ ಹೋಗಲು ಬಿಡುವುದಿಲ್ಲ ಎಂದು ಹೇಳುತ್ತಿರುವ ಜನರ ಬಳಿ ಬಂದಿರುವುದಕ್ಕೆ ನಾನು ಪುಣ್ಯವಂತನಾಗಿದ್ದೇನೆ” ಎಂದು ತಿಳಿಸಿದ್ದಾರೆ.

“ಇಲ್ಲಿನ ಜನರು ನನ್ನನ್ನು ಈಗಾಗಲೇ ತಮ್ಮ ಪುತ್ರ, ಸಹೋದರ ಅಥವಾ ಸ್ನೇಹಿತನೆಂದು ಸ್ವೀಕರಿಸಿದ್ದಾರೆ. ಚುನಾವಣಾ ಫಲಿತಾಂಶ ಏನೇ ಬಂದರೂ ನಾನು ಅವರೊಂದಿಗಿರುತ್ತೇನೆ. ಅವರು ಅರ್ಹರಾಗಿರುವ ಉತ್ತಮ ಭವಿಷ್ಯಕ್ಕಾಗಿ ನಾನು ಅವರೊಂದಿಗಿರಲಿದ್ದೇನೆ. ಈ ಜನರು ನನ್ನ ಶಕ್ತಿಯಾಗಿದ್ದು, ದೇವರ ಕೃಪೆಯಿಂದ ನಾನು ಗೆಲ್ಲುತ್ತೇನೆ. ನಾನೀಗ ಇರುವ ಸಕಾರಾತ್ಮಕ ಮನಸ್ಥಿತಿಯಲ್ಲಿ ಸೋಲಿನ ಸಾಧ್ಯನತೆ ಬಗ್ಗೆ ಚಿಂತಿಸಲೂ ಹೋಗುತ್ತಿಲ್ಲ” ಎಂದೂ ಅವರು ಹೇಳಿದ್ದಾರೆ.

“ನನಗೆ ದೇಶದಲ್ಲಿನ ಎಲ್ಲ ಧರ್ಮಗಳ ಬಗ್ಗೆ ಗೌರವವಿದೆ. ಆದರೆ, ಜನರನ್ನು ಅವರ ಧರ್ಮದ ಗುರುತಿನ ಆಧಾರದಲ್ಲಿ ಮತ ಬ್ಯಾಂಕ್ ನಂತೆ ನಡೆಸಿಕೊಳ್ಳಬಾರದು” ಎಂದು ತಮ್ಮ ಧಾರ್ಮಿಕ ಹಿನ್ನೆಲೆಯ ಕುರಿತು ಪ್ರಶ್ನಿಸಿದಾಗ ಯೂಸುಫ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಪ್ರತಿಷ್ಠಿತ ಬಹರಂಪುರ್ ಲೋಕಸಭಾ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ಯೂಸುಫ್ ಪಠಾಣ್ ಕಣಕ್ಕಿಳಿದಿದ್ದು, ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಹಾಲಿ ಸಂಸದ ಅಧೀರ್ ರಂಜನ್ ಚೌಧುರಿ ಅವರಿಗೆ ಅವರ ತವರು ಕ್ಷೇತ್ರದಲ್ಲೇ ತೀವ್ರ ಪೈಪೋಟಿ ಒಡ್ಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News