ನೈನಿತಾಲ್‌ ಪ್ರದೇಶದಲ್ಲಿ ವ್ಯಾಪಿಸುತ್ತಿರುವ ಕಾಡ್ಗಿಚ್ಚು; ಸೇನೆಗೆ ಬುಲಾವ್

Update: 2024-04-27 09:21 GMT

Photo: PTI

ನೈನಿತಾಲ್: ಉತ್ತರಾಖಂಡದ ನೈನಿತಾಲ್‌ ಪ್ರಾಂತ್ಯದಲ್ಲಿ ಕಾಡ್ಗಿಚ್ಚು ಕಳೆದ 36 ಗಂಟೆಗಳಿಗೂ ಹೆಚ್ಚು ಕಾಲದಿಂದ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣಕ್ಕೆ ಭಾರತೀಯ ವಾಯು ಸೇನೆ ಮತ್ತು ಸೇನೆಯನ್ನು ಕರೆಸಲಾಗಿದೆ.

ಶುಕ್ರವಾರ ಕಾಡ್ಗಿಚ್ಚು ನೈನಿತಾಲದ ಪೈನ್ಸ್‌ ಪ್ರದೇಶದಲ್ಲಿರುವ ಹೈಕೋರ್ಟ್‌ ಕಾಲನಿಯ ಸಮೀಪವೂ ಹರಡಿದೆ. ಇದರಿಂದ ಈ ಪ್ರದೇಶದಲ್ಲಿ ವಾಹನ ಸಂಚಾರವೂ ಬಾಧಿತವಾಗಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದ ವಿವಿಧೆಡೆ 31 ಕಾಡ್ಗಿಚ್ಚು ಪ್ರಕರಣಗಳು ವರದಿಯಾಗಿದ್ದು 33.34 ಹೆಕ್ಟೇರ್‌ ಅರಣ್ಯ ಪ್ರದೇಶ ನಾಶವಾಗಿದೆ.

ಭಾರತೀಯ ವಾಯು ಸೇನೆಯ ಎಂಐ-17 ಹೆಲಿಕಾಪ್ಟರ್‌ ಒಂದು ಭೀಮ್ತಲ್‌ ಸರೋವರದಿಂದ ಬಂಬಿ ಬಕೆಟಿನಲ್ಲಿ ನೀರು ಸಂಗ್ರಹಿಸಿ ಪೈನ್ಸ್‌, ಭೂಮಿಯಧರ್‌, ಜ್ಯೋಲಿಕೋಟ್‌, ನಾರಾಯಣ ನಗರ್‌, ಭವಾಲಿ, ರಾಮಘರ್‌ ಮತ್ತು ಮುಕ್ತೇಶ್ವರ ಪ್ರದೇಶಗಳ ಹೊತ್ತಿ ಉರಿಯುವ ಅರಣ್ಯ ಪ್ರದೇಶಗಳ ಮೇಲೆ ಸುರಿದಿದೆ.

ಹೈಕೋರ್ಟ್‌ ಕಾಲನಿ ಸಮೀಪದಲ್ಲಿ ಕಾಡ್ಗಿಚ್ಚು ಒಂದು ಹಳೆಯ ಮೆನಯನ್ನು ಆವರಿಸಿದೆ ಆದರೆ ಇತರ ಯಾವುದೇ ಕಟ್ಟಡಗಳಿಗೆ ಹಾನಿಯಾಗದೇ ಇದ್ದರೂ ಕಟ್ಟಡಗಳ ಸಮೀಪವೇ ಬೆಂಕಿ ಹರಡಿದೆ ಎಂದು ಹೈಕೋರ್ಟ್‌ನ ಸಹಾಯಕ ರಿಜಿಸ್ಟ್ರಾರ್‌ ಹೇಳಿದ್ದಾರೆ. ನೈನಿ ಸರೋವರದಲ್ಲಿ ಬೋಟಿಂಗ್‌ ಅನ್ನೂ ನಿಷೇಧಿಸಲಾಗಿದೆ.

ಕಳೆದ ವರ್ಷದ ನವೆಂಬರ್‌ 1ರಿಂದ ರಾಜ್ಯದಲ್ಲಿ 575 ಕಾಡ್ಗಿಚ್ಚು ಪ್ರಕರಣಗಳು ವರದಿಯಾಗಿದ್ದು 689.89 ಹೆಕ್ಟೇರ್‌ ಅರಣ್ಯ ಭೂಮಿ ನಾಶಗೊಂಡಿದೆ.

ಜಖೋಲಿ ಮತ್ತು ರುದ್ರಪ್ರಯಾಗ್‌ ಎಂಬಲ್ಲಿ ಅರಣ್ಯ ಪ್ರದೇಶಗಳಿಗೆ ಬೆಂಕಿ ಹಚ್ಚಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News