ಐಐಟಿಯ ಶೇ. 30ರಷ್ಟು ವಿದ್ಯಾರ್ಥಿಗಳಿಗೆ ಇನ್ನೂ ಉದ್ಯೋಗ ಇಲ್ಲ!

Update: 2024-04-04 04:05 GMT

ಸಾಂದರ್ಭಿಕ ಚಿತ್ರ Photo:PTI

ಮುಂಬೈ: ಭಾರತದ ತಂತ್ರಜ್ಞಾನ ಉದ್ಯಮಗಳು ಹೊಸ ಸುತ್ತಿನ ನೇಮಕಾತಿಯನ್ನು ಜನವರಿಯಲ್ಲಿ ಆರಂಭಿಸಿದ್ದರೂ, ಭಾರತದ ಅತ್ಯುನ್ನತ ಶಿಕ್ಷಣ ಸಂಸ್ಥೆಗಳಾದ ಐಐಟಿಯ ಶೇಕಡ 30- 35ರಷ್ಟು ವಿದ್ಯಾರ್ಥಿಗಳು ಇನ್ನೂ ಉದ್ಯೋಗ ದೊರಕದೇ ಅತಂತ್ರರಾಗಿ ಉಳಿಯುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ನೇಮಕಾತಿ ವೇಗ ಕೂಡಾ ನಿಧಾನವಾಗಿದೆ. ಬಹುತೇಕ ಕ್ಯಾಂಪಸ್ಗಳು ಪ್ರತಿಭೆಗಳನ್ನು ನೇಮಕ ಮಾಡಿಕೊಳ್ಳಲು ಹೊಸದಾಗಿ ನೋಂದಣಿ ಮಾಡಿಕೊಳ್ಳಲು ಕಂಪನಿಗಳಿಗೆ ಅವಕಾಶ ನೀಡಿವೆ.

ಕೆಲ ಐಐಟಿಗಳು ಕ್ಯಾಂಪಸ್ ಗೆ ಆಗಮಿಸಿ ನೇಮಕ ಮಾಡಿಕೊಳ್ಳಲು ಬಯಸುವ ಕಂಪನಿಗಳ ಹುಡುಕಾಟವನ್ನು ತೀವ್ರಗೊಳಿಸಿವೆ. ಇತರ ಕೆಲ ಕ್ಯಾಂಪಸ್ ಗಳು ತಮ್ಮ ಎರಡನೇ ಹಂತದ ಉದ್ಯೋಗ ಸ್ಥಾನೀಕರಣ ಅಭಿಯಾನವನ್ನು ಜೂನ್ ಅಥವಾ ಜುಲೈ ವರೆಗೂ ವಿಸ್ತರಿಸಲು ನಿರ್ಧರಿಸಿವೆ. ಮತ್ತೆ ಕೆಲವು ಕ್ಯಾಂಪಸ್ ಗಳು, ಮೊದಲ ಹಂತದ ನೇಮಕಾತಿಗೆ ನೋಂದಾಯಿಸಿ, ಕ್ಯಾಂಪಸ್ ಸಂದರ್ಶನಕ್ಕೆ ಆಗಮಿಸಲು ವಿಫಲವಾದ ಕಂಪನಿಗಳನ್ನು ಸಂಪರ್ಕಿಸುವ ಪ್ರಯತ್ನದಲ್ಲಿವೆ.

"ಆರ್ಥಿಕ ಹಿಂಜರಿಕೆ ಜಾಗತಿಕ ವಿದ್ಯಮಾನವಾಗಿದೆ. ವಿಶ್ವಾದ್ಯಂತ ಐಟಿ ಉದ್ಯಮಗಳ ನೇಮಕಾತಿ ನಿರಾಶಾದಾಯಕವಾಗಿದೆ. ಜೂನ್ವರೆಗೆ ಮುಂದುವರಿಯಲಿರುವ ಎರಡನೇ ಹಂತದಲ್ಲಿ ಈಗ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉದ್ಯೋಗ ಪಡೆದಿದ್ದಾರೆ" ಎಂದು ಬಾಂಬೆ ಐಐಟಿ ಮೂಲಗಳು ಹೇಳಿವೆ.

ಪೊವಾಯ್ ಕ್ಯಾಂಪಸ್ ನಲ್ಲಿ ಬಿ ಟೆಕ್, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ಪಡೆದ ಶೇಕಡ 33ರಷ್ಟು ವಿದ್ಯಾರ್ಥಿಗಳು ನೇಮಕಾತಿ ನಿರೀಕ್ಷೆಯಲ್ಲಿದ್ದಾರೆ. ಕಳೆದ ವರ್ಷದ ಮೊದಲ ಹಂತದಲ್ಲೂ ಇದೇ ಪರಿಸ್ಥಿತಿ ಇತ್ತು. ಉದ್ಯೋಗ ಸ್ಥಾನೀಕರಣಕ್ಕೆ ನೋಂದಣಿಯಾದ 2400 ಮಂದಿಯ ಪೈಕಿ 1970 ಮಂದಿ ಪರೀಕ್ಷೆ ಹಾಗೂ ಸಂದರ್ಶನಕ್ಕೆ ಬಂದಿದ್ದು, ಮಾರ್ಚ್ ಅಂತ್ಯದ ವೇಳೆಗೆ 1300 ಮಂದಿ ಉದ್ಯೋಗ ಪಡೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News