ಉಕ್ರೇನ್ ಮೇಲೆ ರಷ್ಯಾ ದಾಳಿ ವಿರುದ್ಧದ ವಿಶ್ವಸಂಸ್ಥೆ ನಿರ್ಣಯದಿಂದ ಹೊರಗುಳಿದ ಭಾರತ

Update: 2024-07-12 06:51 GMT

ಸಾಂದರ್ಭಿಕ ಚಿತ್ರ (X/@UN_News_Centre)

ವಿಶ್ವಸಂಸ್ಥೆ: ಉಕ್ರೇನ್ ವಿರುದ್ಧದ ಅತಿಕ್ರಮಣವನ್ನು ತಕ್ಷಣ ಸ್ಥಗಿತಗೊಳಿಸುವಂತೆ ರಷ್ಯಾವನ್ನು ಆಗ್ರಹಿಸುವ ಕುರಿತು ವಿಶ್ವಸಂಸ್ಥೆಯ ಸಾಮಾನ್ಯಸಭೆ ಮಂಡಿಸಿದ ನಿರ್ಣಯದ ಮೇಲಿನ ಮತದಾನದಿಂದ ಭಾರತ ಹೊರಗುಳಿದಿದೆ. ಛಪೋರಿಝಿಯಾ ಅಣುವಿದ್ಯುತ್ ಸ್ಥಾವರದಿಂದ ಮಿಲಿಟರಿ ಮತ್ತು ಇತರ ಅನಧಿಕೃತ ಸಿಬ್ಬಂದಿಯನ್ನು ವಾಪಾಸು ಪಡೆಯುವಂತೆಯೂ ನಿರ್ಣಯದಲ್ಲಿ ಒತ್ತಾಯಿಸಲಾಗಿದೆ.

193 ಸದಸ್ಯಬಲದ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ 2024ರ ಜುಲೈ 11ರಂದು ಈ ನಿರ್ಣಯವನ್ನು ಆಂಗೀಕರಿಸಲಾಗಿದ್ದು, 99 ದೇಶಗಳು ನಿರ್ಣಯವನ್ನು ಬೆಂಬಲಿಸಿದವು. ಒಂಬತ್ತು ದೇಶಗಳು ವಿರೋಧಿಸಿದ್ದು, 60 ದೇಶಗಳು ಮತದಾನದಿಂದ ದೂರ ಉಳಿದವು.

ಮತದಾನದಿಂದ ದೂರ ಉಳಿದ ದೇಶಗಳಲ್ಲಿ ಭಾರತ, ಬಾಂಗ್ಲಾದೇಶ, ಭೂತಾನ್, ಚೀನಾ, ಈಜಿಪ್ಟ್, ನೇಪಾಳ, ಪಾಕಿಸ್ತಾನ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ಸೇರಿವೆ. ವಿರುದ್ಧವಾಗಿ ಮತ ಚಲಾಯಿಸಿದ ದೇಶಗಳಲ್ಲಿ ಬೈಲೋರಷ್ಯಾ, ಕ್ಯೂಬಾ, ಉತ್ತರಕೊರಿಯಾ, ರಷ್ಯಾ ಮತ್ತು ಸಿರಿಯಾ ಸೇರಿವೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News